ಮೂಡಿಗೆರೆ: ಪಟ್ಟಣದ ವಾರ್ಡ್ ನಂಬರ್ 5 ರಲ್ಲಿ ಸಂದೇಶ ಚಿತ್ರಮಂದಿರ ಹಾಳು ಬಿಟ್ಟಿದ್ದು ಸುತ್ತಲೂ ಗಿಡಗಳು ಮತ್ತು ಕಾಡು ಬೆಳೆದಿದ್ದು ವಿಷಪೂರಿತ ಹಾವುಗಳು ಸೇರಿಕೊಂಡಿವೆ ಅದರಲ್ಲಿ ಇಂದು ಮಧ್ಯಾಹ್ನ ವಿಷಪೂರಿತ ಹಾವು ಸುನಿತ ಎಂಬುವರಿಗೆ ಸೇರಿದ ಅಂಗಡಿ ಒಳಗೆ ಸೇರಿಕೊಂಡಿದ್ದು ವಿಷಯ ತಿಳಿದ ಸ್ಥಳೀಯ ನಿವಾಸಿ ಉಮಾಶಂಕರ್ ಉರಗ ತಜ್ಞ ಕುರುಕ ಮಕ್ಕಿ ಸುರೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿ ಹಾವನ್ನು ಸೆರೆ ಹಿಡಿದು ನಿರ್ಜನ ಪ್ರದೇಶಕ್ಕೆ ಬಿಡುವಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿರುವುದು ಸಾರ್ವಜನಿಕರಿಗೆ ಧೈರ್ಯ ಬಂದಂತಾಗಿದೆ

ಸುದ್ಫಿಗಾರರೊಂದಿಗೆ ಪ್ರತಿಕ್ರಿಯಿಸಿದ ಉಮಾಶಂಕರ್ ಇನ್ನು ಅನೇಕ ಹಾವುಗಳು ಆ ಆವರಣದಲ್ಲಿ ಇದ್ದು ಸಾರ್ವಜನಿಕರ ಪ್ರಾಣಕ್ಕೆ ಅಪಾಯ ವಿರುವದರಿಂದ ಆ ಸ್ಥಳಕ್ಕೆ ಸಂಬಂಧಪಟ್ಟವರಿಗೆ ಪಟ್ಟಣ ಪಂಚಾಯತಿಯಿಂದ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುಬೇಕು ಎಂದುಒತ್ತಾಯಿಸಿದ್ದಾರೆ,
ಅದಲ್ಲದೆ ಮೂಡಿಗೆರೆಯ ಪಟ್ಟಣದ ಖಾಲಿ ಇರುವ ನಿವೇಶನಗಳಲ್ಲಿ ಕಾಡು ಗಿಡಗಳು ಬೆಳೆದು ಅಕ್ಕ ಪಕ್ಕದ ಮನೆಗಳಿಗೆ ಹಾವುಗಳು ಬರುವ ಸಂಭವ ಹೆಚ್ಚಿರುವುದರಿಂದ ಎಲ್ಲಾ ಖಾಲಿ ನಿವೇಶನ ಖಾತೆದಾರರಿಗೆ ನೋಟಿಸ್ ಜಾರಿ ಮಾಡುವ ಮುಖಾಂತರ ಕಾಡು ಕಡಿದು ಸ್ವಚ್ಛಗೊಳಿಸುವಂತೆ ಅಗ್ರಹಿಸಿದರು ಪಟ್ಟಣದಲ್ಲಿ ಆನೇಕ ನಿವೇಶನಗಳಲ್ಲಿ ಕಾಡು ಬೆಳೆದಿದ್ದು ಪ್ರತಿ ಸೈಟ್ ಮಾಲೀಕರಿಗೆ ಸೂಕ್ತ ಕ್ರಮ ಮತ್ತು ದಂಡ ವಿಧಿಸುವ ಕಾರ್ಯವನ್ನು ಕೈಗೆತ್ತಿಕೊಂಡರೆ ಒಳ್ಳೆಯದು ಇಲ್ಲವಾದಲ್ಲಿ ಮುಂದಿನ ಯಾವುದೇ ಪ್ರಾಣ ಹಾನಿ ಆದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಹೇಳಿದರು
