ಮೂಡಿಗೆರೆ: ಮಾಕೋನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೫೦ ವರ್ಷ ಪೂರೈಸಿದ್ದು ೫೦ ನೇ ವಾರ್ಷಿಕ ಅಂದರೆ ೨೫-೨೬ ನೇ ಸಾಲಿನ ೨೦,೫೩,೭೧೨.೯೦ ಲಕ್ಷ ಲಾಭದ ಹಾದಿಯಲ್ಲಿ ಮುನ್ನಡೆದಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್.ಅಶ್ವಥ್ ತಿಳಿಸಿದರು.

ಮಾಕೋನಹಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೫-೧೬ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೇಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು. ಯುವಕರಲ್ಲಿ ಸಹಕಾರ ಭಾವನೆಯನ್ನ ಮೂಡಿಸುವುದೇ ಸಂಘದ ಧ್ಯೇಯೋದ್ಧೇಶವಾಗಿದ್ದು ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ಮ ನೀಡುವುದಾಗಿ ಮತ್ತು ರೈತರು ಹಾಗೂ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಫ್ಯಾಕ್ಟ್ ಲಿಮಿಟೆಡ್ ಹಾಗೂ ಪಿ.ಪಿ.ಎಲ್. ಕೊಂಡಾಢೀಸ್, ಇಫ್ಕೋ ಗೊಬ್ಬರ ಕಂಪೆನಿಗಳ ಡೀಲರ್ ಸೀಪ್ ಪಡೆಯಲಾಗಿದ್ದು ಇದರ ಉಪಯೋಗವನ್ನು ಪಡೆಯುವಂತೆ ಮನವಿ ಮಾಡಿದರು
ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಅಜಿತ್ ಕಿಸಾನ್ ಕ್ರೆಡಿಟ್ ಕಾರ್ಡ್ ಬೆಳೆ ಸಾಲ, ಗೊಬ್ಬರ ಸಾಲ, ಸ್ವಂತ ಬಂಡವಾಳ ಮಧ್ಯಮಾವದಿ ಸಾಲ, ವಾಹನ ಸಾಲ, ಭವಿಷ್ಯ ನಿದಿ ಮೇಲಿನ ಸಾಲ, ವೇತನ ಸಾಲ, ವ್ಯಾಪಾರ ಸಾಲ, ಸಮಗ್ರ ಅವಧಿ ಆಧಾರ ಸಾಲದ ಬಗ್ಗೆ ಮಾಹಿತಿ ನೀಡಿದರು.
ಎಸ್ಎಸ್ಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಧಾನ್ವಿತ ಎಸ್.ಜೆ, ಧೃತಿ ಕೆ.ಎಸ್, ಸಾನಿತ್ಯ ಎಮ್ .ಎಸ್, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ಪ್ರಣವ್ ಎಸ್.ಬಿ., ಭರದ್ವಜ್ ಪಿ.ಯು, ಸುದೀಪ್ ಅವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಮೂರ್ತಿ ಪಿ.ಎಸ್, ನಿರ್ದೇಶಕರುಗಳಾದ ಜಿ.ಯು.ಚಂದ್ರೇಗೌಡ, ಎಂ.ಎಲ್.ಕಲ್ಲೇಶ್, ಎಸ್.ವಿ.ಸಂದೀಪ್, ಶ್ರೀಮತಿ ಬಿ.ಟಿ.ಮಂಜುಳ, ಶ್ರೀಮತಿ ಶೃತಿ ಡಿ.ಸಿ., ಮನು ಎಂ.ಎನ್, ದೇವಿಪ್ರಸಾದ್ ಎನ್.ಎಸ್., ರವಿಕಿರಣ್ ಜಿ.ವಿ., ಅಣ್ಣಪ್ಪ ಎನ್.ಟಿ, ಪದನಿಮಿತ್ತ ನಿರ್ದೇಶಕರು ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ನಿತಿನ್ ಪಟೇಲ್ ಉಪಸ್ಥಿತರಿದ್ದರು, ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಸದಸ್ಯರುಗಳು ಮತ್ತು ಗ್ರಾಮಸ್ಥರು ಸಭೇಯಲ್ಲಿ ಭಾಗವಹಿಸಿದ್ದರು.
