Wednesday, September 9, 2026
Homeಜಿಲ್ಲಾಸುದ್ದಿಚೆಸ್ ಆಟದಲ್ಲಿ ಭಾರತ ಪ್ರತಿನಿಧಿಸುವ ಕನಸು ಕಂಡ ಮೂಡಿಗೆರೆ ಸ್ಟಾರ್ ಕ್ರಿಕೆಟ್ ತಂಡದ ಆಟಗಾರ ಖಾಲಿದ್...

ಚೆಸ್ ಆಟದಲ್ಲಿ ಭಾರತ ಪ್ರತಿನಿಧಿಸುವ ಕನಸು ಕಂಡ ಮೂಡಿಗೆರೆ ಸ್ಟಾರ್ ಕ್ರಿಕೆಟ್ ತಂಡದ ಆಟಗಾರ ಖಾಲಿದ್ ಪುತ್ರಿ

Telegram Group
Join Now

ಮೂಡಿಗೆರೆ: ತಾಲೂಕಿನ ಖ್ಯಾತ ಕ್ರಿಕೆಟ್ ಆಟಗಾರರಾದ ಖಾಲಿದ್ ಬಿದರಹಳ್ಳಿ ಹಾಗೂ ಶ್ರೀಮತಿ ರೇಷ್ಮಾ ಬಾನು ಅವರ ಪುತ್ರಿ ಮಿಸ್ಬಾ ಖಾನಂ ಅವರು ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಚೆಸ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾ

ಕಳೆದ ವರ್ಷ ಬೆಂಗಳೂರಿನ ಮತ್ತಿಕೆರೆಯ ರಾಮಯ್ಯ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಿಸ್ಬಾ ಅವರು ಭಾಗವಹಿಸಿ, ಮೂಡಿಗೆರೆಗೆ ಹೆಮ್ಮೆ ತಂದಿದ್ದರು.ತಮ್ಮ ಉತ್ತಮ ಆಟದಿಂದ ಮತ್ತೊಂದು ಸಾಧನೆ ಗೈದಿರುವ ಇವರು 07-08-2026 ರಂದು ನಡೆದ ತಾಲ್ಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಮೂಡಿಗೆರೆ ತಾಲ್ಲೂಕಿನಿಂದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅವರ ನಿರಂತರ ಪರಿಶ್ರಮ, ಚೆಸ್ ಮೇಲಿನ ಆಸಕ್ತಿ ಮತ್ತು ಸಾಧಿಸುವ ಛಲಕ್ಕೆ ಸಾಕ್ಷಿಯಾಗಿದೆ.ಕೆಲ ಪಂದ್ಯಗಳಲ್ಲಿ ಸೋತರು ಸೋಲೆ ಗೆಲುವಿನ ಮೆಟ್ಟಿಲು ಎಂಬ ಮಾತಿನಂತೆ ಹಠ ಬಿಡದೆ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ

ಖ್ಯಾತ ಕ್ರಿಕೆಟಿಗರ ಪುತ್ರಿಯಾಗಿರುವ ಮಿಸ್ಬಾ ಅವರು, ತಮ್ಮದೇ ಆದ ಗುರುತನ್ನು ಚೆಸ್ ಕ್ಷೇತ್ರದಲ್ಲಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಿಸ್ಬಾ ಅವರಿಗೆ ಬಿದರಹಳ್ಳಿ ಗ್ರಾಮಸ್ಥರು, ಸಂಘ ಸಂಸ್ಥೆಗಳು ಅಭಿನಂದನೆಗಳು ತಿಳಿಸಿರುತ್ತಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚೆಸ್ ಕ್ಷೇತ್ರದಲ್ಲಿ ಭಾರತ ಪ್ರತಿಧಿಸುವ ಹಂಬಲವಿದೆ, ತಂದೆ ಓರ್ವ ಕ್ರೀಡಾಪಟುವಾಗಿದ್ದು ಅವರಂತೆ ದೊಡ್ಡ ಹೆಸರು ಮಾಡುವ ಕನಸಿದೆ.ಗುರುಗಳು ಹಾಗೂ ಶಾಲಾ ಆಡಳಿತ ಮಂಡಳಿ ಪ್ರೋತ್ಸಾಹ ಸಾಧನೆ ಮಾಡಲು ಪ್ರೇರಣೆಯಾಗಿದೆ ಎಂದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!