ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ತಕ್ಷಣವೇ ಜಾರಿಗೆ ತಂದು ಕರ್ನಾಟಕದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು ಜನಪ್ರಿಯ ಸರ್ಕಾರ ಎಂದು ದೇಶದಲ್ಲಿ ಹೆಸರು ಮಾಡುತ್ತಿರುವುದು ಬಿಜೆಪಿಗರಿಗೆ ತಲೆನೋವಾಗಿ ಪರಿಣಮಿಸಿದೆ.

ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ನಾವು ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡುತ್ತೇವೆ,
ಕಪ್ಪು ಹಣ ವಾಪಸ್ ತರುತ್ತೇವೆ ವಾರ್ಷಿಕ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಜನರನ್ನು ಮಂಗ ಮಾಡಿ ಅಧಿಕಾರಕ್ಕೆ ಬಂದು ತಮ್ಮ ಕುಟುಂಬದ ಶ್ರೇಯೋಭಿವೃದ್ದಿಗೆ ಕೇಂದ್ರ ಸರ್ಕಾರದ ಸಚಿವರು ಶ್ರಮಿಸುತ್ತಿರುವುದು ನಾಚಿಕೆಗೇಡು.
ಎಥನಾಲ್ ಇಂಧನಕ್ಕೆ ಬೆರಸಿ ಹಲವಾರು ವಾಹನಗಳು ಗ್ಯಾರೇಜ್ ಸೇರುತ್ತಿವೆಯೇ ಹೊರತು ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಇಳಿಯುತ್ತಿಲ್ಲ.ಅಂಬಾನಿ ಆದಾನಿ ಅಮಿತ್ ಶಾ ನಿತಿನ್ ಗಡ್ಕರಿ ಇಂತವರ ಮಕ್ಕಳ ಖಜಾನೆ ತುಂಬುತ್ತಿದೆ ಹೊರತು ಬಡವರ ಬದುಕುಗಳು ಸರಿಯಾಗುತ್ತಿಲ್ಲ.
ಕಾಂಗ್ರೆಸ್ ನಾಯಕರ ಬೆಳವಣಿಗೆ ಸಹಿಸಲಾಗದೆ ಇಂತಹ ಇಡಿ, ಐಟಿ ಅಂತಹ ಕೇಂದ್ರದ ಅಧೀನದಲ್ಲಿ ಇರುವ ಸಂಸ್ಥೆಗಳ ದಾಳಿಗಳನ್ನು ನಡೆಸಿ ಹೆದರಿಸಲು ಹೊರಟಿರುವುದು ಖಂಡನೀಯ. ಬಿಜೆಪಿಗರ ಮೇಲೆ ದಾಳಿ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.
