Friday, September 11, 2026
Homeಜಿಲ್ಲಾಸುದ್ದಿತೇಜಸ್ವಿಯವರು ಪರಿಸರದ ನೈಜ ಘಟನೆಗಳಿಗೆ ಅಕ್ಷರ ರೂಪಕೊಟ್ಟ ಮಹಾನೀಯ ವ್ಯಕ್ತಿ: ಅನಿತಾ ಜಗದೀಪ್ ಗೌಡ

ತೇಜಸ್ವಿಯವರು ಪರಿಸರದ ನೈಜ ಘಟನೆಗಳಿಗೆ ಅಕ್ಷರ ರೂಪಕೊಟ್ಟ ಮಹಾನೀಯ ವ್ಯಕ್ತಿ: ಅನಿತಾ ಜಗದೀಪ್ ಗೌಡ

Telegram Group
Join Now

ಮೂಡಿಗೆರೆ: ಪೂರ್ಣ ಚಂದ್ರ ತೇಜಸ್ವಿ ಯುವ ಜನತೆಗೆ ಆದರ್ಶವಾಗಿದ್ದು ಪರಿಸರದ ನೈಜ ಘಟನೆಗಳಿಗೆ ಅಕ್ಷರ ರೂಪ ಕೊಟ್ಟ ಮಹನೀಯರು ಎಂದು ಅನಿತಾ ಜಗದೀಪ್ ಅಭಿಪ್ರಾಯ ಪಟ್ಟಿದ್ದಾರೆ

ಕೆ.ಪಿ. ಪೂರ್ಣ ಚಂದ್ರ ತೇಜಸ್ವಿ ಅವರ 88ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ವತಿಯಿಂದ ಬೆಟ್ಟಗೆರೆಯ ಶ್ರೀಮತಿ ನಿಂಗಮ್ಮ ಬೋಮ್ಮಯ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶಾಂತಕುಮಾರ್ ತೆಜಸ್ವಿ ಅವರ ಬಗ್ಗೆ ಉಪನ್ಯಾಸ ನೀಡಿ ತೇಜಸ್ವಿ ಅವರು ಕಾದಂಬರಿ,ಕಥಾ ಸಂಕಲನ,ಪ್ರಬಂಧ ಮತ್ತು ಅನುವಾದ ಸೇರಿದಂತೆ ಅನೇಕ ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ. ಕರ್ವಾಲೊ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್ ಕಾಡು ಮತ್ತು ಕ್ರೌರ್ಯ, ಅಬಚೂರಿನ ಪೋಸ್ಟ್ ಆಫೀಸು, ತಬರನ ಕಥೆ, ಕಿರುಗೂರಿನ ಗಯ್ಯಾಳಿಗಳು,ನಮ್ಮ ಮಲೆನಾಡಿನ ವಿಸ್ಮಯದ ಬಗ್ಗೆ ವಿವರವಾಗಿ ಬರೆದಿದ್ದಾರೆ. ಯುವ ಪೀಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು,

ತೆಜಸ್ವಿ ಅವರು ಒಡನಾಡಿಗಳಾದ ಬಿ.ಆರ್.ಯತೀಶ್ ಗೌಡ್ರು ಅವರ ಜೊತೆಗಿನ ಒಡನಾಟದ ಬಗ್ಗೆ ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆ ಲೋಕೇಶ್ ಬೆಟ್ಟಗೆರೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬಂಗಾರ ಚೆಲುವಯ್ಯ, ನವಿನ್.ಬಿ.ಆರ್, ಜ್ಯೋತಿ ಮುಖ್ಯ ಶಿಕ್ಷಕರು, ಬಿ.ಎ.ಯತೀಶ್, ಸರ್ವೇಶ್ ಹಳಿಕೆ, ನವಿನ್ ಆನೆದಿಬ್ಬ, ರುದ್ರೇಶ್.ಬಿ.ಎಸ್,
ಸುಪ್ರೀತ್, ರಾಮಚಂದ್ರ ಮುಂತಾದವರು ಇದ್ದರು

ಇದೆ ವೇಳೆ ಶಾಲಾ ಮಕ್ಕಳಿಗೆ ಪೂರ್ಣ ಚಂದ್ರ ತೇಜಸ್ವಿಯವರ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!