ಕೊಪ್ಪ: ರಾಜ್ಯ ಸರ್ಕಾರದ ಸೂಚನೆಯಂತೆ ಪ್ರತಿ ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಕಾರ್ಯಕ್ರಮವೂ ಕೊಪ್ಪ ಪಟ್ಟಣದ ಟೌನ್ ಹಾಲ್ ನಲ್ಲಿ ಶನಿವಾರ ನಡೆದಿತ್ತು.ಈ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಅವರು ಅಧಿಕಾರಿಗಳಿಗೆ ಪ್ರಶ್ನೆ ಕೇಳಿದ್ದರು ಹಾಗೂ ಪ್ರಶ್ನೆ ಕೇಳಿದ ವಿಡಿಯೋ ಎಲ್ಲಾ ಕಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಕಾರ್ಯಕ್ರಮದಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಅವರು ಪ್ರಶ್ನೆ ಮಾಡಿದ್ದಕ್ಕೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಅವರನ್ನು ಅವಾಚ್ಯ ಶಬ್ದಗಳನ್ನು ಅಡಿ ಬರಹದಲ್ಲಿ ಬರೆದು ನೀಡಿರುತ್ತಾರೆ. ಅವಾಚ್ಯವಾಗಿ ಅಡಿಬರಹ ಬರೆದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಸುನೀಲ್ ಅವರು ಹರಿಹರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಧರ್ಭದಲ್ಲಿ ಭಂಡಿಗಡಿ ಪಂಚಾಯತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸಮರ್ಥ್ ಹೆಬ್ಬರಡಿ, ವಿಜಯಕುಮಾರ್ ಕೊಡಿಗೆ, ಪ್ರೇಮ್ ಕುಮಾರ್, ಸುಕೇಶ, ಸಂದೀಪ್, ವಿನಯ್, ನಿಜಾಮ್ ಭಾನುತೇಜ ಇದ್ದರು.
