Monday, September 14, 2026
Homeಜಿಲ್ಲಾಸುದ್ದಿನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ಮಾರ್ಕೆಟ್‌ಗೆ ಗ್ರಾಹಕರ ಲಗ್ಗೆ, ಹೂ, ಹಣ್ಣುಗಳ ಖರೀದಿ ಜೋರು

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ಮಾರ್ಕೆಟ್‌ಗೆ ಗ್ರಾಹಕರ ಲಗ್ಗೆ, ಹೂ, ಹಣ್ಣುಗಳ ಖರೀದಿ ಜೋರು

Telegram Group
Join Now

ಬೆಂಗಳೂರು: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ತಯಾರಿ ಜೋರಾಗಿದ್ದು, ಬೆಂಗಳೂರು ನಗರದ ಮಾರುಕಟ್ಟೆಗಳಲ್ಲಿ ವಹಿವಾಟು ಭರದಿಂದ ಸಾಗಿದೆ. ಹಬ್ಬದ ವೇಳೆ ಹೂವು, ಹಣ್ಣು, ತರಕಾರಿ ಮತ್ತು ಪೂಜಾ ಸಾಮಗ್ರಿಗಳ ಬೆಲೆ ಏರಿರುವುದು ಜನರ ಜೇಬಿಗೆ ಹೊಡೆತ ಬಿದ್ದಿದೆ.

ಮಳೆ ಕೊರತೆ ಮತ್ತು ನೀರಿನ ಅಭಾವದಿಂದಾಗಿ ಹೂವು ಹಾಗೂ ಹಣ್ಣಿನ ಇಳುವರಿ ಮೇಲೆ ಪರಿಣಾಮ ಬೀರಿದ್ದರೆ, ಹಬ್ಬದ ಬೇಡಿಕೆಯಿಂದಾಗಿ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗಿದೆ.

ಬೆಲೆ ಏರಿಕೆಯ ನಡುವೆಯೂ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಬಸವನಗುಡಿ, ಗಾಂಧಿ ಬಜಾರ್ ಮತ್ತು ಯಶವಂತಪುರ ಸೇರಿದಂತೆ ನಗರದ ಮಾರುಕಟ್ಟೆಗಳು ಖರೀದಿದಾರರಿಂದ ತುಂಬಿ ತುಳುಕುತ್ತಿವೆ.

ಕೆ.ಆರ್. ಮಾರುಕಟ್ಟೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಹಬ್ಬದ ಸಡಗರವು ಪ್ರತಿ ಗಲ್ಲಿಯಲ್ಲೂ ಕಳೆಗಟ್ಟಿದ್ದು, ಬೆಂಗಳೂರಿನ ಜನರು ಗಣೇಶ ಚತುರ್ಥಿ 2026 ಅನ್ನು ಗ್ರ್ಯಾಂಡ್ ಆಗಿ ಆಚರಿಸುತ್ತಿದ್ದಾರೆ.

ಹಬ್ಬದ ಸಂಭ್ರಮದ ನಡುವೆ, ವಿಶೇಷವಾಗಿ ಮನೆಗಳಲ್ಲಿ ಪ್ರತಿಷ್ಠಾಪಿಸಲು ಸಣ್ಣ ಗಾತ್ರದ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಶಾಲೆಗಳು, ಕಾಲೇಜುಗಳು ಮತ್ತು ಅಪಾರ್ಟ್‌ಮೆಂಟ್ ಸಂಘಗಳು ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದು, ಮೂರ್ತಿಗಳ ಬೆಲೆ 500 ರಿಂದ 5,000 ರೂ. ದಷ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!