ಈ ವಿಚಾರವಾಗಿ ದೊಡ್ಡಮಟ್ಟದ ಚರ್ಚೆಯಾಗಿದೆ.. ನನಗೂ ಸಾಕಷ್ಟು ಜನ ಕರೆ ಮಾಡಿ ಮಾತಾಡಿದ್ದಾರೆ.. ನೂರಾರು ಜನರು ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಸೆಕ್ಷನ್ ನಲ್ಲಿ ದಾಖಲಿಸಿದ್ದೀರಿ.. ನಿಮ್ಮೆಲ್ಲರ ಅಭಿಪ್ರಾಯವನ್ನ ನಾನು ಗೌರವಿಸುತ್ತೇನೆ.
ನಾವು ಎಲ್ಲಿಯೂ ಕೂಡ ತಹಸೀಲ್ದಾರ್ ಅವರು ಯೋಧನ ಜಾತಿ ಪ್ರಮಾಣ ಪತ್ರ ನಿರಾಕರಣೆ ಮಾಡಿದ್ದಾರೆ ಅಂತಾ ಸುದ್ದಿಯನ್ನ ಮಾಡಿಲ್ಲ.. ಮೊನ್ನೆ ನಡೆದ ಸಭೆಯಲ್ಲಿ ಶಾಸಕರಾದ ಟಿ.ಡಿ ರಾಜೇಗೌಡರು ಹಾಗೂ ಸುಧೀರ್ ಕುಮಾರ್ ಮುರೊಳ್ಳಿಯವರು, ತಹಸೀಲ್ದಾರ್ ವಿರುದ್ಧ ರೇಗಾಡಿದ್ರು, ತರಾಟೆ ತೆಗೆದುಕೊಂಡರು ಅಂತಾ ಸುದ್ದಿ ಮಾಡಿದ್ದೀವಿ..ತಹಸೀಲ್ದಾರ್ ಉದ್ದೇಶಿಸಿ ರೇಗಾಡಿರೋ ವೀಡಿಯೋ ಕೂಡ ಇದೆ.. ಈ ವಿಚಾರವಾಗಿ ಸಾಕಷ್ಟು ಜನ ನಿಷ್ಪಕ್ಷಪಾತವಾಗಿ ಸುದ್ದಿ ಮಾಡಿದ್ದೀರಿ ಅಂತಾ ಹೇಳಿದ್ದೀರಿ.. ಕೆಲವರು ಇದು ಪೂರ್ವಗ್ರಹ ಪೀಡಿತ ಸುದ್ದಿ ಅಂತಾ ಅಭಿಪ್ರಾಯಿಸಿದ್ದೀರಿ, ಪರವಾಗಿಲ್ಲ ನಿಮ್ಮ ಅಭಿಪ್ರಾಯವನ್ನೂ ನಾನು ಗೌರವಿಸುತ್ತೇನೆ. ಇಲ್ಲಿ ನಿಮಗೆ ಮಾಹಿತಿ ಕೊರತೆ ಇರಬೇಕು ಅನ್ನೋದು ನನ್ನ ಅನಿಸಿಕೆ. ಇದರಲ್ಲಿ ಪೂರ್ವಗ್ರಹ ಪೀಡಿತರಾಗಿ ಸುದ್ದಿ ಮಾಡೋದೇನಿದೆ. ಈ ಪ್ರಸಂಗ ಹತ್ತಾರು ಜನರ ಎದುರೇ ನಡೆದಿದೆ.. ಸಂಪೂರ್ಣ ವೀಡಿಯೋ ದಾಖಲಾಗಿದೆ.. ತಹಸೀಲ್ದಾರ್ ವಿರುದ್ಧ ರೇಗಾಡಿದಾಗ, ತಹಶೀಲ್ದಾರ್’ಗೆ ತರಾಟೆ ಅಂತಾ ಸುದ್ದಿಯಾಗಿದೆ, ಜೊತೆಗೆ ಅವರ ಪೋಟೋವನ್ನೇ ಬಳಸಲಾಗಿದೆ ಅಷ್ಟೇ..! ಇದರಲ್ಲಿ ಯಾವುದೇ ವಿಶೇಷತೆಯೂ ಇಲ್ಲ, ಪೂರ್ವಗ್ರಹ ಮನಸ್ಥಿತಿಯೂ ಇಲ್ಲ.. ಇದ್ದಿದ್ದನ್ನ ಇದ್ದಂಗೆ ತೋರಿಸಲಾಗಿದೆ.! ಆಗಿರೋ ಘಟನೆಯನ್ನ ಸುದ್ದಿ ಮಾಡಲಾಗಿದೆ ಅಷ್ಟೇ.!
ಆ ಬಳಿಕ ಅವರ ಪತಿ ಕರೆ ಮಾಡಿ, ನನ್ನ ಪತ್ನಿ ವಿರುದ್ಧ ಅವರು ರೇಗಾಡಿಯೇ ಇಲ್ಲ.. ನಿಮಗೆ ನನ್ನ ಪತ್ನಿಯ ಪೋಟೋ ಬಳಸಲು ಅನುಮತಿ ಕೊಟ್ಟಿದ್ದು ಯಾರು..? ಪರ್ಮಿಷನ್ ತಗೊಳದೇ ಹೇಗೆ ಪೋಟೋ ಬಳಕೆ ಮಾಡಿದ್ದೀರಿ..? ಹೀಗೆ ಕೆಲ ಅಸಂಬದ್ಧ ಪ್ರಶ್ನೆಗಳನ್ನ ಕೇಳಿದ್ರು.. ಅವರು Public Servant.. ಸಾರ್ವಜನಿಕ ವೇದಿಕೆಯಲ್ಲಿ ಯೋಧನ ಜಾತಿ ಪ್ರಮಾಣ ಪತ್ರದ ಕುರಿತು ಚರ್ಚೆಯಾಗಿದೆ.. ಅಲ್ಲಿ ಚರ್ಚೆಯಾದ ವಿಚಾರವನ್ನಷ್ಟೇ ಹಾಕಲಾಗಿದೆ, ತಹಶೀಲ್ದಾರ್ ಪೋಟೋವನ್ನ ಸುದ್ದಿಗೆ ಅನುಗುಣವಾಗಿ ಬಳಸಲಾಗಿದೆ ಅಂತಾ ಹೇಳಿದ್ರೂ, ಪೋಟೋ ತೆಗೆಯಲಿಲ್ಲ ಅಂದ್ರೆ ಲೀಗಲ್ ಆಕ್ಷನ್ ತಗೊಳ್ತೀನಿ ಅನ್ನೋದು ಅಧಿಕಾರದ ದುರುಪಯೋಗ ಅಲ್ಲದೇ ಬೇರೆನೂ ಅಲ್ಲ.! ಅಷ್ಟಕ್ಕೂ ಅವರ (ಕೊಪ್ಪ ತಹಶೀಲ್ದಾರ್) ಇಲಾಖೆ ವಿಚಾರದಲ್ಲಿ ಶೃಂಗೇರಿ ತಹಶೀಲ್ದಾರ್ ಮೂಗು ತೂರಿಸೋ ಪ್ರಮೇಯವೇ ಬರೋದಿಲ್ಲ..! ಒಂದ್ವೇಳೆ, ಮಾಧ್ಯಮದವರೋ, ಸಾರ್ವಜನಿಕರೋ ಕೊಪ್ಪ ತಹಶೀಲ್ದಾರ್ ಅವರ ವೈಯಕ್ತಿಕ ವಿಚಾರದಲ್ಲಿ ಏನಾದ್ರೂ ಮಾತಾಡಿದ್ರೆ, ಅವರು ನನ್ನ ಹೆಂಡ್ತಿ ಅಂತಾ ಬರಲಿ.. ಯಾರೂ ಪ್ರಶ್ನೆ ಮಾಡಲ್ಲ. ಆದ್ರೆ ಇಲಾಖೆ ವಿಚಾರದಲ್ಲಿ ಸುದ್ದಿ ಮಾಡಿದಾಗ, ಅವರು ನನ್ನ ಹೆಂಡ್ತಿ ಅಂತಾ ಮೂಗು ತೂರಿಸೋದು ಸರಿಯಲ್ಲ..!
ಕೊನೆ ಮಾತು.. ಒಂದು ಸುದ್ದಿಗೆ ತಹಸೀಲ್ದಾರ್ ಅವರ ‘ಸಹಜ’ವಾದ ಪೋಟೋವನ್ನ ಬಳಸಲು (ಮಾಧ್ಯಮದವರಿಗೆ ಆಗಲಿ ಅಥವಾ ಸಾರ್ವಜನಿಕರಿಗಾಗಲಿ) ಯಾರ ಅನುಮತಿಯೂ ಬೇಕಾಗಿಲ್ಲ ಅನ್ನೋ ಕನಿಷ್ಠ ಜ್ಞಾನ ಕೊಪ್ಪ ತಹಸೀಲ್ದಾರ್ ಪತಿ ಶೃಂಗೇರಿ ತಹಸೀಲ್ದಾರ್ ಅವರಿಗೆ ಇಲ್ಲವಾಯಿತ್ತಲ್ಲ ಅನ್ನೋ ‘ಅಚ್ಚರಿ’ ಈಗಲೂ ನನಗಿದೆ.
ಧನ್ಯವಾದಗಳು
ಪ್ರಶಾಂತ್ ನಾರಾಯಣ್
ಯೋಧನಿಗೆ ಜಾತಿ ಸರ್ಟಿಫಿಕೇಟ್ ರಿಜೆಕ್ಟ್
ಸುಧೀರ್ ಕುಮಾರ್ ಮುರೊಳ್ಳಿ ಆಕ್ರೋಶ
RI ನೀನು ಭ್ರಷ್ಟ ಅಂತಾ ಗೊತ್ತಿದೆ ಎಂದು ಕ್ಲಾಸ್
ಕೊಪ್ಪ ತಹಶೀಲ್ದಾರ್ ಲಿಖಿತಾಗೂ ತರಾಟೆ
ಸಸ್ಪೆಂಡ್ ಮಾಡಿ ಎಂದು ವೇದಿಕೆಯಿಂದ ತೆರಳಿದ RI
