Monday, September 14, 2026
Homeಜಿಲ್ಲಾಸುದ್ದಿಗೌರಿ ಗಣೇಶ ಹಬ್ಬದ ಪ್ರಯುಕ್ತ ಜಯಪುರ ಠಾಣೆಯ ಪಿಎಸ್ಐ ಅವರಿಂದ "ಖಾಕಿ ಗೌರಿಯರಿಗೆ" ವಿಶೇಷ ಉಡುಗೊರೆ.

ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಯಪುರ ಠಾಣೆಯ ಪಿಎಸ್ಐ ಅವರಿಂದ “ಖಾಕಿ ಗೌರಿಯರಿಗೆ” ವಿಶೇಷ ಉಡುಗೊರೆ.

Telegram Group
Join Now

ಜಯಪುರ: ಜಯಪುರ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಗಳಾದ ವೀಣಾ, ಕಲಾವತಿ,  ಅಂಬಿಕಾ, ಪ್ರೇಮಕುಮಾರಿ ಅವರಿಗೆ ಉಡುಗೊರೆ ನೀಡಿ, ಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ಪಿಎಸ್ಐ ರವೀಶ್ ಗೌರಿ ಹಬ್ಬ ಎಂದರೆ ಕೇವಲ ಒಂದು ಆಚರಣೆಯಲ್ಲ; ಅದು ಸ್ತ್ರೀ ಶಕ್ತಿಯನ್ನು ಆರಾಧಿಸುವ ಪವಿತ್ರ ದಿನ. ಹೆಣ್ಣು ಅಂದರೆ ಪ್ರೀತಿ, ಕರುಣೆ, ತಾಳ್ಮೆ ಮತ್ತು ತ್ಯಾಗದ ಸಾಕಾರ ರೂಪ. ಮನೆಯನ್ನು ಬೆಳಗುವ ಮಹಾಲಕ್ಷ್ಮಿಯೂ ಅವಳೇ, ಸಂಸ್ಕಾರ ಕಲಿಸುವ ಸರಸ್ವತಿಯೂ ಅವಳೇ. ಸಂಕಷ್ಟ ಬಂದಾಗ ಧೈರ್ಯದಿಂದ ಮುನ್ನುಗ್ಗುವ ದುರ್ಗೆಯೂ ಅವಳೇ. ಹೆಣ್ಣು ಒಂದು ಕುಟುಂಬದ ಕಣ್ಣು ಮಾತ್ರವಲ್ಲ, ಇಡೀ ಸಮಾಜದ ಜೀವಾಳ.

ಈ ಹಬ್ಬದ ಸಂಭ್ರಮದಲ್ಲಿ ನಮ್ಮ ಮಹಿಳಾ ಸಿಬ್ಬಂದಿಗಳು ಮನೆಗೆ ಹೋಗಲು ಆಗುವುದಿಲ್ಲ, ಹಬ್ಬದ ಸಂಧರ್ಭದಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದು ಅವರು ಕರ್ತವ್ಯ ನಿರ್ವಹಿಸ ಬೇಕಿದೆ ಹೀಗಾಗಿ ನಮ್ಮ “ಖಾಕಿ ಗೌರಿಯರಿಗೆ” ನಾವು ಸಲ್ಲಿಸುವ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ನಿಮ್ಮ ತ್ಯಾಗ ಮತ್ತು ಸೇವೆಗೆ ಸಮಾಜ ಸದಾ ಋಣಿಯಾಗಿದೆ ಎಂದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!