ಚಿಕ್ಕಮಗಳೂರು : ನೆನೆಗುದಿಗೆ ಬಿದ್ದಿರುವ 3 ದಶಕಗಳ ಚಿಕ್ಕಮಗಳೂರು ತಾಲೂಕಿನ ಮಳಲೂರು ಏತ ನೀರಾವರಿ ಯೋಜನೆಯನ್ನ ಪೂರ್ಣಗೊಳಿಸುವಂತೆ ಸಾವಿರಾರು ರೈತರು ಜಿಲ್ಲಾ ಕೇಂದ್ರ ಚಿಕ್ಕಮಗಳೂರು ನಗರಕ್ಕೆ ಪಾದಯಾತ್ರೆ ನಡೆಸಿದರು.
ಈ ಯೋಜನೆ ಪೂರ್ಣಗೊಂಡ್ರೆ ತಾಲೂಕಿನ 25ಕ್ಕೂ ಹೆಚ್ಚು ಗ್ರಾಮಗಳ ಜನ-ಜಾನುವಾರುಗಳು ಸೇರಿದಂತೆ ಕೃಷಿಗೆ ಸಂಜೀವಿನಿ ಆಗುತ್ತಿತ್ತು. ಆದ್ರೆ ಈ ಯೋಜನೆಗೆ ಹತ್ತಾರು ಕೋಟಿ ಪೋಲಾಗಿದ್ರೂ ಕೂಡ ಯೋಜನೆ ಪೂರ್ಣಗೊಂಡಿಲ್ಲ, ಹೀಗಾಗಿ ಸಾವಿರಾರು ರೈತರು ಪಾದಯಾತ್ರೆ ಕೈಗೊಂಡಿದ್ದು, ಜಿಲ್ಲಾಡಳಿತದ ವಿರುದ್ಧ, ಡಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ನಾವು ಪಾದಯಾತ್ರೆ ನಡೆಸಿ ನಗರದ ಆಜಾದ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸ್ತಾ ಇದ್ರೂ, ನಮ್ಮನ್ನ ಭೇಟಿಯಾಗಿ ಮನವಿಯನ್ನ ತೆಗೆದುಕೊಳ್ಳೋ ಮನಸ್ಸನ್ನ ಜಿಲ್ಲಾಧಿಕಾರಿ ಮಾಡಲಿಲ್ಲ, ಇವರೊಬ್ಬ ಅವಿವೇಕಿ ಡಿಸಿ ಅಂತಾ 86 ವರ್ಷದ ಹಿರಿಯ ರೈತ ಕೃಷ್ಣೇಗೌಡ ಗರಂ ಆದ್ರು. ಹಾಗೆಯೇ ಶಾಸಕರಾದ ನಯನಾ ಮೋಟಮ್ಮನವರಿಗೂ ಕೂಡ ಜವಾಬ್ದಾರಿ ಇದೆ.. ಅವರು ಕೂಡ ಇತ್ತ ಗಮನವಹಿಸಬೇಕು ಅಂತಾ ರೈತರು ಆಗ್ರಹಿಸಿದ್ರು.
ಒಟ್ಟಿನಲ್ಲಿ ಚಿಕ್ಕಮಗಳೂರಲ್ಲಿ ಮತ್ತೊಂದು ರೈತ ಕಹಳೆ ಮೊಳಗುವ ಎಲ್ಲಾ ಲಕ್ಷಣಗಳು ಎದ್ದುಕಾಣುತ್ತಿದ್ದು, ಆಕ್ರೋಶಗೊಂಡಿರುವ ರೈತರ ಬೇಡಿಕೆಗೆ ಮಣಿಯಲೇ ಬೇಕಾದ ಸ್ಥಿತಿಯಲ್ಲಿ ಜಿಲ್ಲಾಡಳಿತವಿದೆ.. ಇಲ್ಲದಿದ್ದರೇ ಅನ್ನದಾತರು ಸಿಡಿದೇಳೋದ್ರಲ್ಲಿ ಯಾವುದೇ ಅನುಮಾನವಿಲ್ಲ.
