ಮೂಡಿಗೆರೆ: ಟೈಲರ್ ಭವನ ನಿರ್ಮಾಣಕ್ಕೆ ಸ್ಥಳ ಮಂಜೂರಾತಿಗೆ ಟೈಲರ್ ಸಂಘದ ಸದಸ್ಯರು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಟೈಲರ್ ಸಂಘದ ಅಧ್ಯಕ್ಷ ಉಮಾಶಂಕರ್ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟೈಲರ್ ಸಂಘದ ಸದಸ್ಯರು ಸಂಘದ ಚಟುವಟಿಕೆಗಳಿಗೆ ಸ್ವಂತ ಕಟ್ಟಡಕ್ಕೆ ಸ್ಥಳವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ,ಹಲವಾರು ವರ್ಷಗಳಿಂದ ಟೈಲರ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವೃತ್ತಿ ಬಾಂದವರು ದೊಡ್ಡ ಸಂಘಟನೆ ಹೊಂದಿದ್ದು, ಹಲವು ವರ್ಷಗಳಿಂದ ಕಟ್ಟಡದ ಕೊರತೆಯಿಂದ ಸಂಘದ ಸಭೆ, ಹಾಗೂ ಕಾರ್ಯಕ್ರಮಗಳು ಖಾಸಗಿ ಕಟ್ಟಡಗಳಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂಡಿಗೆರೆ ಪಟ್ಟಣ ವ್ಯಾಪ್ತಿಯಲ್ಲಿ ಟೈಲರ್ ಸಂಘಕ್ಕೆ ಭವನ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಲು ಮಾನ್ಯ ದಂಡಾಧಿಕಾರಿಗಳಲ್ಲಿ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಟೈಲರ್ಸ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್, ಮೂಡಿಗೆರೆ ನಗರ ಸಮಿತಿ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮಂಜುಳಾ, ಖಜಾಂಚಿ ಪ್ರಕಾಶ್,ದೀಪಿಕಾ, ಪೂಜಾ ರಾಜೇಶ್ , ಯೋಗೇಶ್, ದುಗ್ಗೇಗೌಡ, ವಲ್ಲಿ , ವೆಂಕಟೇಶ್, ಕೃಷ್ಣ ಆಚಾರ್ , ಪಾಪು, ಸುರೇಶ್ ಸೇರಿದಂತೆ ನಗರ ಸಮಿತಿ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
