ಸಕಲೇಶಪುರ: ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಪಂಪ್‌ಸೆಟ್ ಮೋಟಾರ್‌ನ ಹುಕ್ ಏಕಾಏಕಿ ಕಳಚಿ ಅವಘಡ ಸಂಭವಿಸಿರುವ ಘಟನೆ ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಸಮೀಪದ ಹಿರಿಯೂರು ಕೂಡಿಗೆ ಬಳಿ ನಡೆದಿದೆ.
ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಕಳಚಿ ರಸ್ತೆಗೆ ಬಿದ್ದ ಭಾರೀ ಪಂಪ್‌ಸೆಟ್ ಮೋಟಾರ್ ಅದೇ ವೇಳೆ ಎದುರಿನಿಂದ ಬರುತ್ತಿದ್ದ ಟಾಟಾ ಸಿಆರ್ ಕಾರಿಗೆ ಮೋಟಾರ್ ಡಿಕ್ಕಿ ಏಕಾಏಕಿ ಎದುರಾದ ಮೋಟಾರ್‌ನಿಂದ ತಪ್ಪಿಸಿಕೊಳ್ಳಲಾಗದೆ ಕಾರಿಗೆ ಡಿಕ್ಕಿ ಆ ರಭಸಕ್ಕೆ ಕಾರಿನ ಮುಂಭಾಗಕ್ಕೆ ಹಾನಿ ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ
ಅಪಘಾತದ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಟ್ರ್ಯಾಕ್ಟರ್‌ನಲ್ಲಿ ಭಾರವಾದ ಯಂತ್ರೋಪಕರಣ ಸಾಗಿಸುವಾಗ ಸುರಕ್ಷತಾ ಕ್ರಮ ಅನುಸರಿಸುವಂತೆ ಆಗ್ರಹ. ಯಂತ್ರೋಪಕರಣಗಳನ್ನು ಸುರಕ್ಷಿತವಾಗಿ ಕಟ್ಟದೆ ಸಾಗಿಸುವುದರಿಂದ ಇಂತಹ ಅವಘಡಗಳ ಆತಂಕ. ವಾಹನ ಚಾಲಕರು ಹಾಗೂ ಯಂತ್ರೋಪಕರಣ ಸಾಗಣೆದಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
