ಬೆಂಗಳೂರು: ನವರಾತ್ರಿ ಹಬ್ಬಕ್ಕೆ ‘ಗೃಹಲಕ್ಷ್ಮಿ’ಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಬ್ಬಕ್ಕೆ ಫಲಾನುಭವಿಗಳ ಅಕೌಂಟ್ಗಳಿಗೆ ಹಣ ಜಮೆ ಆಗಲಿದೆ.
ಗೃಹಲಕ್ಷ್ಮಿ ಪರಿಷ್ಕರಣೆಯ ಕಸರತ್ತಿನ ಮಧ್ಯೆಯೂ ಸಿಎಂ ಸೂಚನೆ ಮೇರೆಗೆ 33ನೇ ಕಂತಿನ ದುಡ್ಡು ರಿಲೀಸ್ಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಈಗಾಗಲೇ ಗೃಹಲಕ್ಷ್ಮಿ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಪರಿಷ್ಕರಣೆ ವೇಳೆಯಲ್ಲೂ ದುಡ್ಡು ಜಮೆಗೆ ಸಿಎಂ ಸೂಚನೆ ನೀಡಿದ್ದಾರೆ. ಪರಿಷ್ಕರಣೆ ಸಂದರ್ಭದಲ್ಲಿ ಗೃಹಲಕ್ಷ್ಮಿ ದುಡ್ಡು ತಡೆಯೋದು ಬೇಡ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ.
