Wednesday, September 30, 2026
Homeಕರ್ನಾಟಕBangalore: ಮರದ ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿ: GBAಗೆ 2 ಕೋಟಿ 77 ಲಕ್ಷ...

Bangalore: ಮರದ ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿ: GBAಗೆ 2 ಕೋಟಿ 77 ಲಕ್ಷ ಪರಿಹಾರ ನೀಡಲು ಹೈಕೋರ್ಟ್‌ ಆದೇಶ

Telegram Group
Join Now

ಬೆಂಗಳೂರು: ಅಪಾಯಕಾರಿ ಮರದ ಕೊಂಬೆ ರಸ್ತೆ ಮೇಲೆ ಬೀಳುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೂ ತುರ್ತು ಕ್ರಮ ಕೈಗೊಳ್ಳದ  ಜಿಬಿಎ ನಿರ್ಲಕ್ಷ್ಯದ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ. ಹಾಗೆ ಮರದ ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ತುತ್ತಾದ ಜಿ.ಚಂದನ್ ಗೆ ದಾಖಲೆಯ 2,77,29,695 ಕೋಟಿ ರೂ. ಪರಿಹಾರ ಪಾವತಿಸುವಂತೆ ಸಹ ಆದೇಶಿಸಿದೆ.

ಹೌದು … ಮರಗಳ ನಿರ್ವಹಣೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (GBA) ಸಾರ್ವಜನಿಕ ರಸ್ತೆ ಮತ್ತು ಜನರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳುವುದು ಕಾನೂನು ಬದ್ಧ ಕರ್ತವ್ಯವಾಗಿದೆ. ಮರದ ಕೊಂಬೆ ರಸ್ತೆ ಮೇಲೆ ಬೀಳುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೂ ತುರ್ತು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಕಿಡಿ ಕಾರಿದೆ. ಹಾಗೆಯೇ, ಇಂತಹ ಘಟನೆಗಳನ್ನು ತಡೆಗಟ್ಟಲು ಹಲವು ನಿರ್ದೇಶನಗಳನ್ನು ನೀಡಿದೆ.

ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದನ್, 2024ರ ಮಾ.7ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಬೆಂಗಳೂರಿನ ಶಾಂತಲಾ ನಗರದ ಕಾನ್ವೆಂಟ್ ರಸ್ತೆಯಲ್ಲಿ ಕಚೇರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯ ಆವರಣದಲ್ಲಿದ್ದ ಗುಲ್ಮೊಹರ್ ಮರದ ದಪ್ಪ ಕೊಂಬೆ ಚಂದನ್ ಕುತ್ತಿಗೆಯ ಮೇಲೆ ಬಿದ್ದಿತ್ತು.

ಘಟನೆಯಿಂದ ಟ್ರೌಮ್ಯಾಟಿಕ್ ಪ್ಯಾರಾಪ್ಲೀಜಿಯಾ (ಆಘಾತದಿಂದ ಉಂಟಾಗುವ ಪಾರ್ಶ್ವವಾಯು) ಸಮಸ್ಯೆಗೆ ಒಳಗಾಗಿರುವ ತನಗೆ ವೈದ್ಯಕೀಯ ಹಾಗೂ ಕೌಟುಂಬಿಕ ಖರ್ಚು ಹಾಗೂ ಪುತ್ರಿಯರ ಶಿಕ್ಷಣ ವೆಚ್ಚಕ್ಕಾಗಿ 5 ಕೋಟಿ ರು. ಪರಿಹಾರ ಒದಗಿಸಲು ಸರ್ಕಾರ ಮತ್ತು ಜಿಬಿಎಗೆ ಆದೇಶಿಸುವಂತೆ ಕೋರಿ ಜಿ.ಚಂದನ್ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಅರ್ಜಿದಾರರಿಗೆ 2,77,29,695 ರು. ಪರಿಹಾರ ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಜಿಬಿಎಗೆ ನಿರ್ದೇಶಿಸಿದೆ.

ಅಲ್ಲದೇ, ಬೆಂಗಳೂರು ನಗರದಲ್ಲಿನ ಅಪಾಯಕಾರಿ ಮರಗಳ ತೆರವು ಸೇರಿದಂತೆ ಸಾರ್ವಜನಿಕ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!