ಬೇಲೂರು: ಹಾಸನ ಜಿಲ್ಲೆಯ ಬೇಲೂರಿನ ತಾಲೂಕಿನಲ್ಲಿ ಆನೆ ದಾಳಿಗೆ ಮತ್ತೊಬ್ಬರು ಉಸಿರು ಚೆಲ್ಲಿದ್ದು, ಬೆಳಗ್ಗೆಯಿಂದ ರೊಚ್ಚಿಗೆದ್ದಿದ್ದ ಜನ ಪ್ರತಿಭಟನೆ ಹಿಂಪಡೆದಿದ್ದಾರೆ. ಸಚಿವ ಶಿವಲಿಂಗೇಗೌಡ ಮನವೊಲಿಸಿದ ಬಳಿಕ ಧರಣಿ ವಾಪಸ್ ಪಡೆದಿದ್ದಾರೆ.
ಎಲ್ಲಾ ಆನೆಗಳನ್ನ 1 ತಿಂಗಳಲ್ಲಿ ಎಲ್ಲಾ 56 ಆನೆಗಳನ್ನೂ ಭದ್ರಾ ಅಭಯಾರಣ್ಯಕ್ಕೆ ಓಡಿಸ್ತೇವೆ ಅಂತಾ ಭರವಸೆ ನೀಡಿದ್ರಿಂದ ಕೊಂಚ ಸಮಾಧಾನವಾಗಿದ್ದಾರೆ. ಬೇಲೂರಲ್ಲಿ ಇವತ್ತು ಏನೇನ್ ಆಯ್ತು ಅನ್ನೋದನ್ನ ನೋಡೋದಾದ್ರೆ ನಾಗೇನಹಳ್ಳಿಯಲ್ಲಿ ಬೆಳಗ್ಗೆ 55 ವರ್ಷದ ಹಫೀಜ್ ರೆಹಮಾನ್ ಅನ್ನೋರು ಕೆಲಸಕ್ಕೆ ತೆರಳಿದ್ರು. ಆಗ ಆನೆಯೊಂದು ದಾಳಿ ಮಾಡಿ ತುಳಿದು ಉಸಿರನ್ನ ನಿಲ್ಲಿಸಿತ್ತು.
ಇದರಿಂದ ಕೋಪಗೊಂಡಿದ್ದ ಸಂಬಂಧಿಕರು ಮತ್ತು ಸ್ಥಳೀಯರು ಮೃ*ತದೇಹವನ್ನ ತಾಲೂಕು ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್ ತಡೆದು ಪ್ರತಿಭಟಿಸಿದ್ರು,. ಸಂಜೆವರೆಗೂ ಸಂಬಂಧಿಕರ ಕಿಚ್ಚು ಮುಂದುವರೆದಿತ್ತು. ಬೆಳಗ್ಗೆ ರಸ್ತೆ ತಡೆದು ಧರಣಿ ನಡೆಸಿದ್ದ ಜನರು, ಬಳಿಕ ಬಸವೇಶ್ವರ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ಮಾಡ್ತೀವಿ ಅಂತಾ ಹಠ ಹಿಡಿದಿದ್ದರು.
ಈ ವೇಳೆ ಪೊಲೀಸರ ಜೊತೆ ಮಾತಿನ ಚಕಮಕಿಯಾಗಿ ನೂಕಾಟ-ತಳ್ಳಾಟವೂ ನಡೆಯಿತು. ನಂತರ ಸ್ಥಳಕ್ಕಾಗಮಿಸಿದ ಎಸ್‌ಪಿ ಮುಂದೆಯೂ ಮೃತರ ಸಂಬಂಧಿಕರು, ಜನ ಕಿಡಿಕಾರಿದ್ರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ರಾಜಕೀಯ ನಾಯಕರು, ರೈತರ ಮುಖಂಡರು ಕೂಡ ಸರ್ಕಾರದ ವಿರುದ್ಧ ಗರಂ ಆದ್ರು. ಸಂಜೆ ಹೊತ್ತಿಗೆ ಧರಣಿ ಸ್ಥಳಕ್ಕೆ ಬಂದ ಸಚಿವ ಶಿವಲಿಂಗೇಗೌಡರಿಗೆ ತರಾಟೆ ತೆಗೆದುಕೊಂಡ್ರು. ಈ ವೇಳೆ ಅವರನ್ನ ಸಮಾಧಾನ ಸಚಿವ ಶಿವಲಿಂಗೇಗೌಡ್ರು, ಆನೆಗಳನ್ನ ಶಾಶ್ವತವಾಗಿ ಓಡಿಸುವ ಭರವಸೆ ನೀಡಿದರು.
