Tuesday, November 17, 2026
Homeಕ್ರೈಮ್Sakaleshpura: ಡೈರಿಗೆ ಹಾಲು ಹಾಕಿ ಹಿಂದಿರುಗುತ್ತಿದ್ದ ಬೈಕ್ ಸವಾರರಿಗೆ ಟಿಪ್ಪರ್ ಡಿ*ಕ್ಕಿ: ಇಬ್ಬರ ಸ್ಥಿತಿ ಗಂಭೀರ!

Sakaleshpura: ಡೈರಿಗೆ ಹಾಲು ಹಾಕಿ ಹಿಂದಿರುಗುತ್ತಿದ್ದ ಬೈಕ್ ಸವಾರರಿಗೆ ಟಿಪ್ಪರ್ ಡಿ*ಕ್ಕಿ: ಇಬ್ಬರ ಸ್ಥಿತಿ ಗಂಭೀರ!

Telegram Group
Join Now

ಸಕಲೇಶಪುರ : ಡೈರಿಗೆ ಹಾಲು ಹಾಕಿ ಹಿಂದಿರುಗುತ್ತಿದ್ದ ಬೈಕ್ ಸವಾರರಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ  ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ.

ಬನವಾಸೆ ಕಡೆಯಿಂದ ಬರುತ್ತಿದ್ದ ಈರೇಶ್ (55) ಹಾಗೂ ರಾಜಣ್ಣ (58) ಅವರಿಗೆ ಟಿಪ್ಪರ್ ಡಿಕ್ಕಿಯಾಗಿದ್ದು ಇಬ್ಬರಿಗೂ ಗಂಭೀರವಾಗಿದ್ದು ಗಾಯಾಳುಗಳನ್ನು ಸಕಲೇಶಪುರದ ಕ್ರಾಫರ್ಡ್ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸಕಲೇಶಪುರ ಕಡೆಯಿಂದ ಅತಿವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳ ಸಂಚಾರವಿದ್ದು, ಅಪಘಾತ ತಡೆಗೆ ಹಂಪ್ಸ್ ಅಳವಡಿಸುವಂತೆ ಸಹ ಗ್ರಾಮಸ್ಥರ ಆಗ್ರಹ ವ್ಯಕ್ತಪಡಿಸಿದ್ದಾರೆ.

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!