Saturday, October 3, 2026
Homeಜಿಲ್ಲಾಸುದ್ದಿದಸರಾ ರಜೆಯನ್ನು ಉಲ್ಲಂಘಿಸಿ ಶಾಲೆ ನಡೆಸುವ ಸಂಸ್ಥೆಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶ್ರೀರಾಮ ಸೇನೆ...

ದಸರಾ ರಜೆಯನ್ನು ಉಲ್ಲಂಘಿಸಿ ಶಾಲೆ ನಡೆಸುವ ಸಂಸ್ಥೆಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶ್ರೀರಾಮ ಸೇನೆ ಒತ್ತಾಯ

Telegram Group
Join Now

ಮೂಡಿಗೆರೆ: ದಸರಾ ರಜೆಯನ್ನು ಉಲ್ಲಂಘಿಸಿ ಶಾಲೆ ನಡೆಸುವ ಶಾಲೆಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮೂಡಿಗೆರೆ ಶ್ರೀ ರಾಮ ಸೇನೆ ಸಂಘಟನೆಯ ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಸುಜೀರ್ ಕಡಿದಾಳು ಕರ್ನಾಟಕ ಸರ್ಕಾರವು ರಾಜ್ಯದ ಶಾಲಾ-ಕಾಲೇಜುಗಳಿಗೆ ದಸರಾ ರಜೆ ಘೋಷಿಸಿರುವ ಸಂದರ್ಭದಲ್ಲಿ, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ರಜೆ ಆದೇಶದ ಆಶಯಕ್ಕೆ ವಿರುದ್ಧವಾಗಿ ರಜೆ ಅವಧಿಯಲ್ಲಿಯೂ ಶಾಲಾ ಚಟುವಟಿಕೆಗಳು ಹಾಗೂ ಪರೀಕ್ಷೆಗಳನ್ನು ನಡೆಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಲಭ್ಯವಾಗಿದೆ.

ದಸರಾ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಪರಂಪರೆ ಹಾಗೂ ನಾಡಿನ ಐತಿಹಾಸಿಕ ಆಚರಣೆಗಳೊಂದಿಗೆ ಸಂಬಂಧ ಹೊಂದಿರುವ ಸಂದರ್ಭದಲ್ಲಿ, ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬ ಹಾಗೂ ಸಮಾಜದೊಂದಿಗೆ ಬೆರೆತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಅರಿಯಲು ಅವಕಾಶ ಕಲ್ಪಿಸುವ ಉದ್ದೇಶಕ್ಕೂ ಈ ರಜೆಯ ಮಹತ್ವವಿದೆ. ಆದರೆ ರಜೆ ಅವಧಿಯಲ್ಲಿ ಪರೀಕ್ಷೆಗಳು ಅಥವಾ ನಿಯಮಿತ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಪರೀಕ್ಷಾ ಒತ್ತಡ ಉಂಟಾಗಿ, ರಜೆಯ ಉದ್ದೇಶವೇ ದುರ್ಬಲವಾಗುವ ಸಾಧ್ಯತೆಯಿದೆ.

ಆದ್ದರಿಂದ ಶ್ರೀರಾಮ ಸೇನಾ ಈ ರೀತಿಯ ಸರ್ಕಾರಿ ರಜೆ ಆದೇಶದ ಉಲ್ಲಂಘನೆಯನ್ನು ತೀವ್ರವಾಗಿ ವಿರೋಧಿಸುತ್ತದೆ. ಯಾವುದೇ ಶಾಲೆ ಸರ್ಕಾರಿ ಆದೇಶವನ್ನು ತನ್ನ ಇಚ್ಛೆಯಂತೆ ನಿರ್ಲಕ್ಷಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಯುವುದು ಅಥವಾ ಪರೀಕ್ಷೆ ನಡೆಸುವುದು ನಡೆಯದಂತೆ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಎಂದರು

ರಜೆ ಅವಧಿಯಲ್ಲಿ ಪರೀಕ್ಷೆ, ತರಗತಿ ಅಥವಾ ಇತರೆ ಕಡ್ಡಾಯ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಶಾಲೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಶಾಲೆಗಳಿಗೆ ಸರ್ಕಾರಿ ರಜೆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಲಿಖಿತ ನಿರ್ದೇಶನ ನೀಡಬೇಕು.

ಸರ್ಕಾರದ ಆದೇಶಗಳು ಕೇವಲ ಕಾಗದದ ಆದೇಶಗಳಾಗಿ ಉಳಿಯದೆ, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನವಾಗಿ ಜಾರಿಯಾಗುವಂತೆ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು

ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಮೂಡಿಗೆರೆ ತಾಲೂಕು ಅಧ್ಯಕ್ಷ ಅರುಣ್ ಕುಂಬರಡಿ,ಉಪಾಧ್ಯಕ್ಷ ತಿಲಕ್ ಸತ್ತಿಗನಹಳ್ಳಿ ಕಾರ್ಯದರ್ಶಿ ಪ್ರಶಾಂತ್ ಬಿಳಗುಳ ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!