Tuesday, October 6, 2026
Homeಜಿಲ್ಲಾಸುದ್ದಿHassan: ಯಾವುದಾದ್ರೂ ಅವಘಡ ಸಂಭವಿಸಿದ್ರೆ ಯಾರು ಹೊಣೆ ?: ಎಸ್ಪಿಗೆ ನೋಟಿಸ್​​ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ

Hassan: ಯಾವುದಾದ್ರೂ ಅವಘಡ ಸಂಭವಿಸಿದ್ರೆ ಯಾರು ಹೊಣೆ ?: ಎಸ್ಪಿಗೆ ನೋಟಿಸ್​​ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ

Telegram Group
Join Now

ಹಾಸನ: ಪೆಂಡಾಲ್ ಗಣಪತಿ ವಿಸರ್ಜನೆ ವಿಚಾರವಾಗಿ ಹಾಸನದಲ್ಲಿ ಜಟಾಪಟಿ ಮುಂದುವರಿದಿದೆ. ಹಾಸನ SP ಶುಭನ್ವಿತಾಗೆ ನೋಟಿಸ್ ವಿಚಾರವಾಗಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಪ್ರತಿಕ್ರಿಯಿಸಿದ್ದಾರೆ.

ಹೌದು .. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತಕ್ಕೆ ಸಮಸ್ಯೆ ಆಗುತ್ತಿತ್ತು. ಅದರ ಹೊಣೆ ಯಾರು ಹೊರುತ್ತಿದ್ದರು? ದೇವರ ದಯೆಯಿಂದ ಏನೂ ಆಗಿಲ್ಲ. ಗಣಪತಿ ವಿಸರ್ಜಿಸುವವರು ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಕಳೆದ ವರ್ಷ ಮೊಸಳೆಹೊಸಳ್ಳಿಯಲ್ಲಿ ಟ್ರಕ್ ಹರಿದು 11 ಜನ ಮೃತಪಟ್ಟಿದ್ರು. ತೊಂದರೆ ಆದಾಗ ಮಾತ್ರ ನಿಯಮಗಳನ್ನು ತೋರಿಸುತ್ತಾರೆ. ಅಲ್ಲಿಯವರೆಗೂ ಕಣ್ಮುಚ್ಚಿ ಕುಳಿತುಕೊಂಡಿರುತ್ತಾರೆ ಎಂದಿದ್ದಾರೆ.

ಹಾಗೆ ದೇವಿಗೆರೆಯಲ್ಲಿ ಗಣಪತಿ ವಿಸರ್ಜನೆ ಮಾಡುವವರು ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಏನಾದರೂ ಘಟನೆ ಆಗಿದ್ದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು? ಕಾಯ್ದೆಯಲ್ಲಿ ಇರುವುದನ್ನು ಫಾಲೋ ಮಾಡ್ತಿಲ್ಲ. ಏನಾದರೂ ಘಟನೆ ಆದರೆ ಮಾತ್ರ ಕಾನೂನು ಸುವ್ಯವಸ್ಥೆಯ ಮಾತು ಬರುತ್ತದೆ. ತಹಶೀಲ್ದಾರ್ ವರದಿ ಸೂಕ್ಷ್ಮವಾಗಿದೆ. ಅದನ್ನು ಪರಿಶೀಲಿಸಿ ಆದೇಶ ಕೊಡಬೇಕಿತ್ತು ಎಂದಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!