Monday, October 26, 2026
Homeಕ್ರೈಮ್Hassan: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವಕ ಎಸ್ಕೇಪ್ : ಪ್ರೇಮಿ ಮನೆ ಮುಂದೆ ಪ್ರೇಯಸಿ ಹಗಲು...

Hassan: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವಕ ಎಸ್ಕೇಪ್ : ಪ್ರೇಮಿ ಮನೆ ಮುಂದೆ ಪ್ರೇಯಸಿ ಹಗಲು ರಾತ್ರಿ ಧರಣಿ!

Telegram Group
Join Now

ಹಾಸನ : ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಎಸ್ಕೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಿ ಮನೆ ಮುಂದೆ ಪ್ರೇಯಸಿಯಿಂದ  ಹಗಲು ರಾತ್ರಿ ಎನ್ನದೇ  ಧರಣಿಗೆ ಕುಳಿತ್ತಿದ್ದಾರೆ.

ಹೌದು .. ಹಾಸನ‌ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಲೆಸೋನಹಳ್ಳಿಯ ಪ್ರೇಮಿ ಮನೆ ಎದುರು  ಭಾನುವಾರ ಸಂಜೆಯಿಂದ ಧರಣಿ ನಡೆಸುತ್ತಿರುವ ಯುವತಿ. ಅದೇ ಗ್ರಾಮದ ಸೂರ್ಯ (26) ವಿರುದ್ದ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.

ಕಾಸರಗೋಡು ಮೂಲದ‌‌ ನಿಷ್ಮಾಗೆ ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಬಗ್ಗೆ ಆರೋಪ ಕೇಳಿ ಬಂದಿದ್ದು  ಮದುವೆಯಾಗುವುದಾಗಿ ನಂಬಿಸಿ ಐದು ತಿಂಗಳು ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದ ನಿಷ್ಮಾ ಹಾಗು ಸೂರ್ಯ ಹಾಗೆ ಮದುವೆಗೆ ಒಪ್ಪಿಗೆ ಸೂಚಿಸಿದ್ದ ಸೂರ್ಯ ಪೋಷಕರು ಆದರೆ ಇದೀಗ ದಿಢೀರ್ ಸೂರ್ಯನೇ ನಾಪತ್ತೆಯಾಗಿದ್ದಾನೆ.

ಸೆಪ್ಟೆಂಬರ್ 2 ರಿಂದ ಸೂರ್ಯ ನಾಪತ್ತೆಯಾಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದು  ಸೂರ್ಯ ಕಣ್ಮರೆಯಾದ ಬಳಿಕ ಮನನೊಂದು ಆತ್ಮಹತ್ಯೆಗೆ ಯತ್ನಿಸಿಧ್ದ ನಿಷ್ಮಿತಾ ನಂತರ ಚಿಕಿತ್ಸೆ ಬಳಿಕ ಪ್ರೇಮಿಗಾಗಿ ಹೋರಾಟಕ್ಕಿಳಿದಿರುವ ಯುವತಿ . ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಯುವತಿ

ಕೇಸ್ ದಾಖಲಿಸಿ ಆರೋಪಿ ಪ್ರೇಮಿ ಪತ್ತೆಗೆ ಮುಂದಾಗಿರುವ ಪೊಲೀಸರು 20 ದಿನ ಕಳೆದರೂ ಪತ್ತೆಯಾಗದ ಪ್ರಿಯಕರನ  ಸುಳಿವು ಅಕ್ಟೋಬರ್ 22 ರಂದು ಚನ್ನರಾಯಪಟ್ಟಣದ ಕಲ್ಲೇಸೋಮನಹಳ್ಳಿಗೆ ಬಂದಿದ್ದ ನಿಷ್ಮಾ ಈ ವೇಳೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರ ಮಧ್ಯಪ್ರವೇಶ ಮಾಡಿದ್ದು  ಠಾಣೆಗೆ ಬಂದು ಸೂರ್ಯನನ್ನು ಕರೆಸುವುದಾಗಿ ಹೇಳಿದ್ದ ಪೋಷಕರು ಭಾನುವಾರದ ಒಳಗೆ ಕರೆಸುವುದಾಗಿ ಹೇಳಿದ್ದರು  ಆದರೆ ಭಾನುವಾರ ಮನೆಗೆ ಬೀಗ ಹಾಕಿ ಹೋಗಿರುವ ಸೂರ್ಯ ‌ಪೋಷಕರು ಹೀಗಾಗಿ ಮನನೊಂದು ದಿಕ್ಕೇ ತೋಚದಂತಾಗಿ ಸುರಿಯುವ ಮಳೆ ಚಳಿ ನಡುವೆ  ಮನೆ ಎದುರೇ ಧರಣಿ ನಡೆಸುತ್ತಿರುವ ಯುವತಿ

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸೂರ್ಯ ಹಾಗೂ ನಿಷ್ಮಾ ಇಬ್ಬರ ನಡುವೆ ಪ್ರೀತಿಯಾಗಿ ಪರಸ್ಪರ ಮದುವೆಯಾಗುವ ಒಪ್ಪಿಗೆಯಲ್ಲಿ ಜೊತೆಯಾಗಿದ್ದ ಜೋಡಿ ಇದೀಗ ಪ್ರೇಮಿ ಕೈಕೊಟ್ಟ ಹಿನ್ನೆಲೆಯಲ್ಲಿ ಪ್ರೇಯಸಿ ಧರಣಿ ನಡೆಸುತ್ತಿದ್ದು  ಪ್ರಕರಣ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್‌ ದಾಖಲಾಗಿದ್ದು ಸೂರ್ಯನಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!