Monday, October 26, 2026
Homeಕ್ರೈಮ್ಪೆಟ್ರೋಲ್ ಬಂಕ್‌ನಲ್ಲಿ ಕಳ್ಳತನ: ಕೆಲವೇ ಗಂಟೆಗಳಲ್ಲಿ ಕಳ್ಳನನ್ನು ಹಿಡಿದ ಎನ್.ಆರ್. ಪುರ ಪೊಲೀಸ್

ಪೆಟ್ರೋಲ್ ಬಂಕ್‌ನಲ್ಲಿ ಕಳ್ಳತನ: ಕೆಲವೇ ಗಂಟೆಗಳಲ್ಲಿ ಕಳ್ಳನನ್ನು ಹಿಡಿದ ಎನ್.ಆರ್. ಪುರ ಪೊಲೀಸ್

Telegram Group
Join Now

ಎನ್ ಆರ್ ಪುರ: ತಾಲ್ಲೂಕಿನ ಮುತ್ತಿನಕೊಪ್ಪದ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸುವ ನೆಪದಲ್ಲಿ ಬಂದು ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದ ಕಳ್ಳನನ್ನು ಎನ್ ಆರ್ ಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನವಾದ ಮಾಹಿತಿ ಸಿಕ್ಕ ತಕ್ಷಣ ಕಾರ್ಯ ಪ್ರವೃತ್ತರಾದ ಎನ್ ಆರ್ ಪುರ ಪೊಲೀಸರು ಕೆಲವೇ ಗಂಟೆಯೊಳಗೆ ಮೊಬೈಲ್ ಪತ್ತೆಯ ಮಾಡಿ ವಾರಸುದಾರರಿಗೆ ಮೊಬೈಲ್ ಹಿಂದಿರುಗಿಸಿದ್ದಾರೆ.
ಬಂಧಿತನನ್ನು ಶಿವಮೊಗ್ಗ ಮೂಲದವನೆಂದು ಗುರುತಿಸಲಾಗಿದ್ದು, ಶಿವಮೊಗ್ಗದಿಂದ ಎನ್ ಆರ್ ಪುರ ಹಾಗೂ ಕೊಪ್ಪದಲ್ಲಿ ಮನೆಮನೆಗೆ ತೆರಳಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು ಅದರೊಂದಿಗೆ ಇಂತಹ ಕಳ್ಳತನಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ.

ಅನುಮಾನಾಸ್ಪದ ವ್ಯಕ್ತಿಗಳಿಂದ ಎಚ್ಚರಿಕೆಯಿಂದ ಇದ್ದು,ಕೂಡಲೇ ಹತ್ತಿರದ ಠಾಣೆಗೆ ಮಾಹಿತಿ ನೀಡಿ
ಬಟ್ಟೆ ವ್ಯಾಪಾರಕ್ಕೆಂದು ಬಂದು ಇಂತಹ ಕೃತ್ಯ ಎಸಗಿದ್ದು,ಮಲೆನಾಡಿನ ಭಾಗದ ಜನರು ಜಾಗೃತರಾಗಿರಬೇಕು. ಹೊರಗಡೆಯಿಂದ ಬಟ್ಟೆ, ಪಾತ್ರೆ,ಗುಜುರಿ ವ್ಯಾಪಾರ ಹಾಗೂ ಇತರೆ ವ್ಯಾಪಾರ ಮಾಡುತ್ತೇವೆ ಎಂದು ಹೇಳಿಕೊಂಡು ಬಂದು ಮನೆಯ ವಾತಾವರಣವನ್ನು ಗಮನಿಸಿ ಈ ತರ ಕಳ್ಳತನ ಮಾಡುವ ಸಂಭವವಿರುತ್ತದೆ ಸಾರ್ವಜನಿಕರು ಅಂತಹ ವ್ಯಕ್ತಿಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಅಂತಹ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದ ಕೂಡಲೇ ಈ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದು ಎನ್ಆರ್ ಪುರ ಠಾಣೆಯ ಪಿಎಸ್ಐ ರವರಾದ ನೂತನ್ ಡಿಇರವರು ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!