Sunday, October 25, 2026
Homeಜಿಲ್ಲಾಸುದ್ದಿಕಾಫಿನಾಡಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ: ಕಳಸ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್!

ಕಾಫಿನಾಡಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ: ಕಳಸ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್!

Telegram Group
Join Now

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಆರ್‌ಎಸ್‌ಎಸ್‌ ಪಥಸಂಚಲನ ನಡೆಯಿತು. 150ಕ್ಕೂ ಹೆಚ್ಚು ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿದರು.

ಕಳಸೇಶ್ವರ ಸ್ವಾಮಿ ದೇಗುಲದಿಂದ ಆರಂಭವಾದ ಪಥಸಂಚಲನ ಮಹಾವೀರ ರಸ್ತೆ ಹಾಗೂ ಕೋಟೆ ರಸ್ತೆಯಲ್ಲಿ ಸಾಗಿತು. ಪಥಸಂಚಲನಕ್ಕೂ ಮುನ್ನ ಶಾಖೆಯ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಪೊಲೀಸರ ಅನುಮತಿಯೊಂದಿಗೆ ನಡೆದ ಪಥಸಂಚಲನಕ್ಕೆ ಒಂದು ಡಿ.ಎ.ಆರ್. ತುಕಡಿ ಸೇರಿದಂತೆ 40ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಒಂದೆಡೆ ಗೃಹ ಸಚಿವ ಪ್ರಿಯಾಂಕ ಖರ್ಗೆ RSS ಪಥಸಂಚಲನ ಮೇಲೆ ಕೆಂಗಣ್ಣು ಬೀರಿ ನಿರ್ಬಂಧಗಳ ಮೇಲೆ ನಿರ್ಬಂಧ ಹೇರಿದ್ದು ತಲೆಕೆಡಿಸಿಕೊಳ್ಳದ
ಗಣವೇಷಧಾರಿಗಳು ಶಿಸ್ತುಬದ್ಧವಾಗಿ ಹೆಜ್ಜೆ ಹಾಕುವ ಮೂಲಕ ಸಂಘಟನೆಯ ಒಗ್ಗಟ್ಟನ್ನು ಪ್ರದರ್ಶಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!