ಹಾಸನ: ಸಕಲೇಶಪುರ ತಾಲೂಕಿನ ಹೆತ್ತೂರು ಆಸ್ಪತ್ರೆಯಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯ ಹಾಗೂ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತಾಯಿ ಮತ್ತು ಮಗು ಸಾವನ್ನಪ್ಪಿರುವ ದುರದೃಷ್ಟಕರ ಘಟನೆ ನಡೆದಿದೆ.
ಘಟನೆ ವಿವರ
ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ A ಬ್ಲಾಕ್ ನಿವಾಸಿಯಾದ ಅಂಬಿಕಾರವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಹೆತ್ತೂರು ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಇಲ್ಲಿ ಸುಮಾರು ಮೂರು ಗಂಟೆಗಳ ಚಿಕಿತ್ಸೆಯ
ನಂತರ ಮಗು ಅಡ್ಡಲಾಗಿದೆ ಇಲ್ಲಿ ಆಗಲ್ಲ ನೀವು ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಅಲ್ಲಿನ ಸಿಬ್ಬಂದಿಯಾದ ಮಂಜುಳಾ ತಿಳಿಸಿರುತ್ತಾರೆ.
ಇಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸರಿಯಾಗಿ ಸಿಗದಿದ್ದಾಗ ತಡವಾಗಿ ಸಕಲೇಶಪುರ ಕ್ಕೆ ಕರೆದುಕೊಂಡು ಬಂದಿದ್ದು,
ಇಲ್ಲೂ ಕೂಡ ಡಾಕ್ಟರ್ ಗರ್ಭಿಣಿಯನ್ನೂ ನೋಡಿ ನೀವು ಹಾಸನ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಲು
ಸಂಬಧಿಕರಿಗೆ ತಿಳಿಸಿದ್ದಾರೆ.
ಕೊಡಲೇ ಹಾಸನಕ್ಕೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಡಾಕ್ಟರ್ ಚಿಕಿತ್ಸೆ ನೀಡಿ ನಾರ್ಮಲ್ ಡೆಲಿವರಿ ಆಗುವುದಿಲ್ಲ ಸಿಜೇರಿಯನ್ ಆಗ್ಬೇಕು ಎಂದು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಮಗು ಹೊಟ್ಟೆಯಲ್ಲಿ ಮರಣ ಹೊಂದಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಮಗುವಿನ ಬಾಡಿಯನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಅಂಬಿಕಾ ರವರ ಸ್ಥಿತಿಯು ಗಂಭೀರವಾಗಿದ್ದು ಇವರನ್ನು ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ರೆಫರ್ ಮಾಡಿರುತ್ತಾರೆ. ಇದೇ ವೇಳೆ ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಹೋಗುವ ದಾರಿ ಮಧ್ಯದಲ್ಲಿ ಅಂಬಿಕ ರವರು ಮರಣ ಹೊಂದಿರುತ್ತಾರೆ. ಅಂಬಿಕಾರವರ ಬಾಡಿಯನ್ನು ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಅಂಬಿಕಾರವರ ಸಂಬಂಧಿಕರಿಂದ ಆಕ್ರೋಶ
ಅಂಬಿಕಾ ರವರಿಗೆ ಹೆತ್ತೂರು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ತಾಯಿ ಮತ್ತು ಮಗು ಮರಣ ಹೊಂದಲು ಸಿಬ್ಬಂದಿಗಳೇ ನೇರಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
