Sunday, October 25, 2026
Homeಕ್ರೈಮ್ಶೃಂಗೇರಿ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಡಸ್ಟರ್ ಕಾರು: ದಂಪತಿ ಸೇಫ್!

ಶೃಂಗೇರಿ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಡಸ್ಟರ್ ಕಾರು: ದಂಪತಿ ಸೇಫ್!

Telegram Group
Join Now

ಚಿಕ್ಕಮಗಳೂರು: ರೆನಾಲ್ಟ್ ಕಂಪನಿಗೆ ಸೇರಿದ ಡಸ್ಟರ್ ಕಾರೊಂದು  ಹೊತ್ತಿ ಉರಿದ ಘಟನೆ ಶೃಂಗೇರಿಯ ಎಸ್.ಕೆ. ಬಾರ್ಡರ್ ಬಳಿ ನಡೆದಿದೆ. ಈ ಅವಘಡದಲ್ಲಿ ದಂಪತಿ ಹಾಗೂ ಮಗ ಅಪಾಯದಿಂದ ಪಾರಾಗಿದ್ದಾರೆ.

ರೆನಾಲ್ಟ್ ಕಂಪನಿಗೆ ಸೇರಿದ ಡಸ್ಟರ್ ಕಾರು ಶಾರ್ಟ್ ಸರ್ಕ್ಯೂಟ್‌ನಿಂದ ರಸ್ತೆಯ ಮಧ್ಯದಲ್ಲೇ ಹೊತ್ತಿ ಉರಿದಿದೆ. ಬೆಂಕಿ ಕಾಣಿಸುತ್ತಿದಂತೆ ಕಾರನ್ನು ನಿಲ್ಲಿಸಿ ಮೂವರು ತಕ್ಷಣ ಹೊರಗೆ ಇಳಿದಿದ್ದಾರೆ. ಇದರಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಂಪತಿ ಕುಂದಾಪುರದಿಂದ ಶೃಂಗೇರಿ ದೇವಸ್ಥಾನಕ್ಕೆ ಬರುತ್ತಿದ್ದರು. ಈ ವೇಳೆ ಈ ಅವಘಡ ನಡೆದಿದೆ ಎಂದು ತಿಳಿದುಬಂದಿದೆ. ಈ ಅವಘಡ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!