Tuesday, October 27, 2026
Homeಜಿಲ್ಲಾಸುದ್ದಿಚಿಕ್ಕಮಗಳೂರಿನ ಅರಣ್ಯ ಇಲಾಖೆಯ ಭವ್ಯ ಕಚೇರಿ ಕಟ್ಟಡ ಇಂದು ಲೋಕಾರ್ಪಣೆ!

ಚಿಕ್ಕಮಗಳೂರಿನ ಅರಣ್ಯ ಇಲಾಖೆಯ ಭವ್ಯ ಕಚೇರಿ ಕಟ್ಟಡ ಇಂದು ಲೋಕಾರ್ಪಣೆ!

Telegram Group
Join Now

ಚಿಕ್ಕಮಗಳೂರು: ನಗರದ ಹೃದಯಭಾಗದಲ್ಲಿರುವ ಹಳೆಯ ಗಂಧದಕೋಟಿ ನಿವೇಶನದಲ್ಲಿ 9.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅರಣ್ಯ ಇಲಾಖೆಯ ಭವ್ಯ ಕಚೇರಿ ಕಟ್ಟಡ ಸಂಕೀರ್ಣ ಇಂದು (ಮಂಗಳವಾರ) ಲೋಕಾರ್ಪಣೆಗೊಳ್ಳಲಿದೆ.

ರಾಜ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ನಗರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ಇಲಾಖೆಯ ಆರು ವಿಭಾಗಗಳ ಕಚೇರಿಗಳು ಇನ್ನು ಮುಂದೆ ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿವೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಭದ್ರಾ ಹುಲಿ ಸಂರಕ್ಷಣಾಧಿಕಾರಿಗಳ ಕಚೇರಿ, ಚಿಕ್ಕಮಗಳೂರು ವೃತ್ತ ಅರಣ್ಯ ವಿಭಾಗದ ಕಚೇರಿ, ಪ್ರಾದೇಶಿಕ ಸಾಮಾಜಿಕ ಅರಣ್ಯ ವಿಭಾಗದ ಕಚೇರಿ, ಕಾರ್ಯಯೋಜನೆ ಮತ್ತು ಭೂಮಾಪನ ವಿಭಾಗ ಹಾಗೂ ಕರ್ನಾಟಕ ಅರಣ್ಯ ನಿಗಮದ ಕಚೇರಿಗಳು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿವೆ.

ಅರಣ್ಯ ಇಲಾಖೆಯ ಕಚೇರಿಗಳು ಈವರೆಗೆ 1909ರಲ್ಲಿ ನಿರ್ಮಾಣಗೊಂಡಿದ್ದ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಕಟ್ಟಡದಲ್ಲಿ ಹಲವು ನ್ಯೂನತೆಗಳಿದ್ದ ಹಿನ್ನೆಲೆಯಲ್ಲಿ ಅದನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ, ಅದೇ ನಿವೇಶನದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ಅರಣ್ಯ ಇಲಾಖೆಯ ವಿವಿಧ ವಿಭಾಗಗಳನ್ನು ಒಂದೇ ಸಂಕೀರ್ಣದಡಿ ತರಲು ಅಂದಿನ ಶಾಸಕ ಸಿ.ಟಿ. ರವಿ ಅವರು ನೀಲನಕ್ಷೆ ಸಿದ್ಧಪಡಿಸಿ, ಭೂಮಿಪೂಜೆಯನ್ನೂ ನೆರವೇರಿಸಿದ್ದರು. ೨೦೨೨ರಲ್ಲಿ ಈ ಯೋಜನೆಗೆ 980 ಲಕ್ಷ ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿತ್ತು.

2023-24ನೇ ಸಾಲಿನಲ್ಲಿ93.02 ಲಕ್ಷ, 2024-25ನೇ ಸಾಲಿನಲ್ಲಿ 53 ಲಕ್ಷ ಹಾಗೂ 2025-26ನೇ ಸಾಲಿನಲ್ಲಿ 833.65 ಲಕ್ಷ ಸೇರಿದಂತೆ ಒಟ್ಟು980 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಮೂಲಕ 9.80 ಕೋಟಿ ವೆಚ್ಚದ ಅರಣ್ಯ ಇಲಾಖೆ ಕಚೇರಿ ಸಂಕೀರ್ಣ ನಿರ್ಮಾಣ ಪೂರ್ಣಗೊಂಡಿದೆ.

ನಗರದ ಹಳೆಯ ಆಡಳಿತಾತ್ಮಕ ಕಟ್ಟಡವೊಂದಕ್ಕೆ ಬದಲಿಯಾಗಿ ರೂಪುಗೊಂಡಿರುವ ಈ ನೂತನ ಸಂಕೀರ್ಣವು ಅರಣ್ಯ ಇಲಾಖೆಯ ಕಾರ್ಯನಿರ್ವಹಣೆಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ವಿವಿಧ ಸೇವೆಗಳನ್ನು ಪಡೆಯಲು ನೆರವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!