ಚಿಕ್ಕಮಗಳೂರು: ಶ್ರೀರಾಮ ಸೇನೆ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ದತ್ತಾಪೀಠದಲ್ಲಿ ಹುಣ್ಣಿಮೆ ಪೂಜೆ ಕಾರ್ಯ ನೆರವೇರಿಸಿದರು
ಶ್ರೀರಾಮ ಸೇನೆ ಸಂಘಟನೆಯ ವಿಭಾಗ ಅಧ್ಯಕ್ಷ ಸುನೀಲ್ ಕೂವೆ ಮಾತನಾಡಿ ಹುಣ್ಣಿಮೆ ಪೂಜೆಯು ಅತ್ಯಂತ ಪವಿತ್ರ ಹಾಗೂ ಮಹತ್ವದ ಧಾರ್ಮಿಕ ಆಚರಣೆಯಾಗಿದೆ. ಚಿಕ್ಕಮಗಳೂರಿನ ಶ್ರೀ ಗುರು ದತ್ತಾತ್ರೇಯ ದತ್ತಪೀಠದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ವಿಶೇಷ ಪೂಜೆಗಳು ಮತ್ತು ಅನುಷ್ಠಾನಗಳು ಜರುಗುತ್ತವೆ. ವಿಶೇಷವಾಗಿ ಮಾರ್ಗಶಿರ ಮಾಸದ ಹುಣ್ಣಿಮೆಯಂದು ಬರುವ ದತ್ತ ಜಯಂತಿ ಉತ್ಸವವು ಇಲ್ಲಿ ಅತ್ಯಂತ ವೈಭವದಿಂದ ನಡೆಯುತ್ತದೆ.
ಹುಣ್ಣಿಮೆಯ ದಿನದಂದು ಭಕ್ತರು ದತ್ತಾಪೀಠಕ್ಕೆ ಭೇಟಿ ನೀಡಿ ಪವಿತ್ರ ದತ್ತ ಪಾದುಕೆಗಳ ದರ್ಶನ ಪಡೆದು ಪುನೀತರಾಗುವುದರ ಜೊತೆಗೆ ಭಗವಂತನಿಗೆ ವಿಶೇಷ ಅಭಿಷೇಕ ಮಾಡಿಸಿ ಹರಕೆ ತೀರಿಸುವುದು ವಾಡಿಕೆ ಎಂದರು
ಹಿಂದೂ ಮುಖಂಡ ರಘು ಸಕಲೇಶಪುರ ಮಾತನಾಡಿ ಪೀಠದಲ್ಲಿರುವ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ ಮತ್ತು ಗಂಧದ ಅರ್ಚನೆಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆ.
ಪ್ರತಿ ತಿಂಗಳ ಹುಣ್ಣಿಮೆಯ ಪೂಜೆಯ ಸಂದರ್ಭದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ದತ್ತಭಕ್ತರು ಭಿನ್ನ ಭಿನ್ನ ಜಿಲ್ಲೆಗಳಿಂದ ಬೃಹತ್ ಬೈಕ್ ಜಾಥಾಗಳ ಮೂಲಕ ಪೀಠಕ್ಕೆ ಆಗಮಿಸುತ್ತಾರೆ. ದತ್ತ ನಾಮ ಸಂಕೀರ್ತನೆ ಮತ್ತು ಭಜನೆಗಳು ನಿರಂತರವಾಗಿ ಜರುಗುತ್ತವೆ
ದತ್ತ ಪೀಠಗಳಲ್ಲಿ ಹುಣ್ಣಿಮೆಯ ವಿಶೇಷ ದಿನಗಳಂದು ದತ್ತಾತ್ರೇಯ ಸ್ವಾಮಿ ಹಾಗೂ ಮಾತಾ ಅನುಸೂಯ ದೇವಿಯವರನ್ನು ಪೂಜಿಸುವ ‘ಅನಘಾಷ್ಟಮಿ ವ್ರತ’ ಮತ್ತು ಸತ್ಯನಾರಾಯಣ ಪೂಜೆಗಳನ್ನು ಸಾಮೂಹಿಕವಾಗಿ ಹಮ್ಮಿಕೊಳ್ಳಲಾಗುತ್ತದೆ.
ದತ್ತಾಪೀಠದಲ್ಲಿ ಹುಣ್ಣಿಮೆ ಪೂಜೆಯು ಹಿಂದೂಗಳ ಅತ್ಯಂತ ಪವಿತ್ರ ಹಾಗೂ ಮಹತ್ವದ ಧಾರ್ಮಿಕ ಆಚರಣೆಯಾಗಿದೆ ಎಂದರು
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸುಜೀರ್ ಕಡಿದಾಳು. ಜಿಲ್ಲಾ ಕಾರ್ಯದರ್ಶಿ ಕೃಷ್ಣ ದೇವ್ ಭಟ್, ಜಿಲ್ಲಾ ಗೌರವ ಅಧ್ಯಕ್ಷ ಕಾರ್ತಿಕ್ ಪಟ್ಟದ್ದುರು, ಮೂಡಿಗೆರೆ ತಾಲ್ಲೂಕು ಗೌರವ ಸಂದೇಶ್ ಗುತ್ತಿ, ತಾಲೂಕು ಅಧ್ಯಕ್ಷ ಅರುಣ್ ಕುಂಬರಡಿ, ಉಪಾಧ್ಯಕ್ಷ ತಿಲಕ್ ಸತ್ತಿಗನಹಳ್ಳಿ ಸೇರಿದಂತೆ ಕಾರ್ಯಕರ್ತರು ಇದ್ದರು
