Tuesday, October 27, 2026
Homeಜಿಲ್ಲಾಸುದ್ದಿಹಾಸನಾಂಬ ದೇವಸ್ಥಾನ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಕೆಎಸ್‌ಆರ್‌ಟಿಸಿ ವಿಶೇಷ ಟೂರ್ ಪ್ಯಾಕೇಜ್

ಹಾಸನಾಂಬ ದೇವಸ್ಥಾನ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಕೆಎಸ್‌ಆರ್‌ಟಿಸಿ ವಿಶೇಷ ಟೂರ್ ಪ್ಯಾಕೇಜ್

Telegram Group
Join Now

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಐತಿಹಾಸಿಕ ಹಾಸನಾಂಬ ದೇವಸ್ಥಾನ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಕೆಎಸ್‌ಆರ್‌ಟಿಸಿ ವಿಶೇಷ ಟೂರ್ ಪ್ಯಾಕೇಜ್ ಪರಿಚಯಿಸಿದೆ. ಅಕ್ಟೋಬರ್ 30 ರಿಂದ ಈ ಪ್ಯಾಕೇಜ್ ಆರಂಭವಾಗಲಿದ್ದು, ಬಸ್‌ಗಳಲ್ಲಿ ಅರಾಮಾಗಿ ಹೋಗಿ ದೇವಿ ದರ್ಶನ ಪಡೆದು ಹಿಂದಿರುಗಬಹುದು.

ಪ್ರಮುಖವಾಗಿ ಬೆಂಗಳೂರು ಮತ್ತು ಮೈಸೂರಿನಿಂದ ‘ಐರಾವತ (ವೋಲ್ವೋ)’ ಹಾಗೂ ನೂತನ ‘ಅಶ್ವಮೇಧ’ (ವೇಗಧೂತ) ಬಸ್‌ಗಳ ಈ ಪ್ರವಾಸ ಇರಲಿದೆ. ಈ ಪ್ಯಾಕೇಜ್‌ನಲ್ಲಿ ದೇವಿಯ 1,000 ರೂ. ಮೌಲ್ಯದ ವಿಶೇಷ ದರ್ಶನದ ಟಿಕೆಟ್‌ ಕೂಡ ಒಳಗೊಂಡಿರುವುದು ವಿಶೇಷವಾಗಿದೆ.

ಹಾಸನಾಂಬ ದೇವಿ ದರ್ಶನಕ್ಕಾಗಿ ಕೆಎಸ್‌ಆರ್‌ಟಿಸಿಯು ಬೆಂಗಳೂರು ಮತ್ತು ಮೈಸೂರಿನಿಂದ ‘ವಿಶೇಷ ಪ್ಯಾಕೇಜ್ ಟೂರ್’ ಆರಂಭಿಸಿದೆ. ಇದರಲ್ಲಿ 1,000 ರೂ. ಮೌಲ್ಯದ ದರ್ಶನ ಟಿಕೆಟ್ ಒಳಗೊಂಡಿದೆ. ಐರಾವತ ವೋಲ್ವೋಗೆ ಬೆಂಗಳೂರಿನಿಂದ 2,500 ರೂ., ಮೈಸೂರಿನಿಂದ 2,000 ರೂ., ಹಾಗೂ ಅಶ್ವಮೇಧ ಬಸ್‌ಗೆ ಕ್ರಮವಾಗಿ 2,000 ರೂ. ಮತ್ತು 1,600 ರೂ. ದರ ನಿಗದಿಪಡಿಸಲಾಗಿದೆ. ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ ಪ್ರವಾಸ ಲಭ್ಯವಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!