ಚಿಕ್ಕಮಗಳೂರು: ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳ ನಡೆ ಖಂಡಿಸಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕಡೂರು ಮೆಸ್ಕಾಂ ಉಪ ವಿಭಾಗದ ಕಚೇರಿ ಮುಂದೆ ಏಕಾಂಗಿ ಧರಣಿ ನಡೆಸಿದ್ದಾರೆ.
ಹೌದು .. ಮೆಸ್ಕಾಂ ಕಚೇರಿ ಮುಂದೆ ಏಕಾಂಗಿ ಧರಣಿ ಕೂತ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಭರತ್ ಕೆಂಪರಾಜು. ತಮ್ಮ ಒಡೆತನದ ಸ್ಟೋನ್ ಕ್ರಷರ್ ವಿದ್ಯುತ್ ಕಟ್ ಮಾಡಿರುವ ಮೆಸ್ಕಾಂ ಸಿಬ್ಬಂದಿ ಸೂಕ್ತ ಕಾರಣವಿಲ್ಲದೆ ವಿದ್ಯುತ್ ಕಟ್ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡೂರು ಪಟ್ಟಣದ ಹೊರವಲಯದ ಮಲ್ಲೇಶ್ವರ ಬಳಿ ಇರುವ ಸ್ವರ್ಣಗೌರಿ ಸ್ಟೋನ್ ಕಚೇರಿಯಲ್ಲಿ ವಿದ್ಯುತ್ ಸಂಪರ್ಕ ಕಟ್ ಮಾಡಿರೋ ಮೆಸ್ಕಾಂ ಸಿಬ್ಬಂದಿ ಯಾವುದೇ ತಪ್ಪು ಮಾಡಿಲ್ಲದಿದ್ರೂ ಸಂಪರ್ಕ ಕಟ್ ಮಾಡಿರೋ ಆರೋಪ ಹೀಗಾಗಿ ಮರು ಸಂಪರ್ಕ ಕಲ್ಪಿಸುವಂತೆ ಪತ್ರ ಬರೆದು ಮನವಿ ಮಾಡಿದ್ರೂ ಸ್ಪಂದಿಸದ ಅಧಿಕಾರಿಗಳು ಆದರೆ ಮರು ಸಂಪರ್ಕಕ್ಕೆ ಹಣಕ್ಕೆ ಡಿಮ್ಯಾಂಡ್ ಮಾಡಿದ ಹಿನ್ನೆಲೆ ಕಂತೆ ಕಂತೆ ನೋಟು, ಚೆಕ್ ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದು ಕಡೂರು ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಹಣಕ್ಕೆ ಆಮೀಷ ಒಡ್ಡುತ್ತಿರುವುದನ್ನು ಖಂಡಿಸಿ ಗಂಭೀರ ಆರೋಪ ಮಾಡಿದ್ದಾರೆ.
