ಹಾಸನ : ಸ್ಟಿಂಗ್ ಆಪರೇಷನ್ ಸಂಚಲನ ವಿಚಾರ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೋರಾಟಕ್ಕೆ ಪರೋಕ್ಷ ಟಾಂಗ್ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿಶಾಸಕ ಪ್ರೀತಂಗೌಡ
ಹಾಸನದಲ್ಲಿ ,ಆತನಾಡಿದ ಅವರು, ವೈಯುಕ್ತಿಕ ವಿಚಾರಗಳು ಅನೇಕ ತಿರುವುಗಳನ್ನು ಪಡೆದುಕೊಂಡಿದೆ ವೈಯುಕ್ತಿಕ ವಿಷಯಗಳನ್ನು ನಂಬಿ ರಾಜಕಾರಣ ಮಾಡುವಂತಹ ರಾಜಕೀಯ ಪಕ್ಷ ಬಿಜೆಪಿ ಅಲ್ಲ ನಾವು ತತ್ವ, ಸಿದ್ದಾಂತ ಮತ್ತು ಜನಸಾಮಾನ್ಯರ ಹೋರಾಟದ ಮುಖೇನ ಪಕ್ಷವನ್ನು ಸಂಘಟನೆ ಮಾಡಲು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ ನಮ್ಮ ರಾಜ್ಯಾಧ್ಯಕ್ಷಾದ ವಿಜಯೇಂದ್ರ ಅವರ ನೇತೃತ್ವದಲ್ಲಿ ಲಿಂಸೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದೆವು ಎಂದರು.
ಹಾಗೆ ಬರಗಾಲ, ರೈತರ ಸಮಸ್ಯೆ ಬಗ್ಗೆ ಹೋರಾಟ ಮಾಡಿದ್ವಿ ವಿಶೇಷ ಅಧಿವೇಶನ ಕರೆಯಲು ಪಾದಯಾತ್ರೆ ಕಾರಣವಾಯ್ತು ವಿರೋಧ ಪಕ್ಷವಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ದಿನನಿತ್ಯ ಹೋರಾಟ ಮಾಡಿದ್ವಿ ಬರುವಂತಹ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸ್ಪಷ್ಟ ಬಹುತದಿಂದ ಸರ್ಕಾರವನ್ನು ರಚಿಸಿ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ ಈ ನಡುವೆ ವೈಯುಕ್ತಿಕ ವಿಚಾರಗಳು ಅನೇಕ ಸಂದರ್ಭಗಳಲ್ಲಿ ಬಂದಿರುವುದು ಕಣ್ಮುಂದೆ ಇದೆ ಯಾರಿಗೆ ಗೊತ್ತು ಅವರು ಮಾತ್ರ ಮಾತನಾಡಬೇಕು ಗೊತ್ತಿಲ್ಲದೆ ಇರುವ ವಿಚಾರವನ್ನು ಮಾತನಾಡಿದ್ರೆ ಉತ್ತರ ಇರುವುದಿಲ್ಲ ಯಾರು ಮಾತನಾಡುತ್ತಿದ್ದಾರೆ ಅವರ ವಿಚಾರದ ಬಗ್ಗೆ ಗೊತ್ತಿರುತ್ತೆ ಹಾಗಾಗಿ ಅವರೇ ಅದರ ಬಗ್ಗೆ ಉತ್ತರ ಕೊಡುವಂತಹದ್ದು ಒಳ್ಳೆಯದು ಎನ್ನುವುದು ನನ್ನ ವೈಯುಕ್ತಿಕ ಭಾವನೆ ಎಂದರು.
ಇದರ ಬಗ್ಗೆ ತನಿಖೆಯಾಗಬೇಕು ಎನ್ನುವುದು ರಾಜ್ಯದ ಜನರ ಅಪೇಕ್ಷೆ ಇದೆ ಆ ನಿಟ್ಟಿನಲ್ಲಿ ಸರ್ಕಾರ ಕೂಡ ತನಿಖೆಗೆ ಆದೇಶ ಕೊಟ್ಟಿದೆ ಸತ್ಯಾಸತ್ಯತೆ ಹೊರಗೆ ಬರಲಿ ಯಾರು ಉಪ್ಪು ತಿಂದಿದ್ದಾರೆ ಅವರು ನೀರು ಕುಡಿಯುತ್ತಾರೆ 2028 ಲೋಕಸಭಾ ಕ್ಷೇತ್ರಗಳಲ್ಲಿ 3 ರಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿ ಎರಡರಲ್ಲಿ ಗೆದ್ದು ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ ನಮ್ಮ ಎನ್‌ಡಿಎ ಮೈತ್ರಿಕೂಟದ ನಾಯಕರು ಅವರು ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಇದ್ದಾರೆ ಅವರ ಕಾಂಗ್ರೆಸ್ ವಿರುದ್ಧ ಹೋರಾಟವನ್ನು ಬಿಜೆಪಿ ಪಕ್ಷ ಬಹಳ ಸಕ್ರಿಯವಾಗಿ ಉಪಯೋಗಿಸಿಕೊಳ್ಳುತ್ತೆ ಕುಮಾರಸ್ವಾಮಿ ಸೇವೆಯನ್ನು ಬಳಸಿಕೊಂಡು ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ವಿಜಯೇಂದ್ರ ಅವರ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ
ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಹಳ ಕಳಂಕ ತರುವಂತಹ ವಿಚಾರ ಎಲ್ಲಾ ರೀತಿಯ ತನಿಖೆಗಳು ಆಗಬೇಕು ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಅಗತ್ಯವಿಲ್ಲ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಅಗೌರವ ತರುವಂತಹ ಕೆಲಸ ಮಾಡಿದ್ದಾರೆಯಾರು ತಪ್ಪು ಮಾಡಿದ್ದಾರೆ ಅದನ್ನು ಕಂಡು ಹಿಡಿಯಬೇಕು ಎಂದು ಹೇಳಿದರು.
