Friday, November 6, 2026
Homeಜಿಲ್ಲಾಸುದ್ದಿಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಮೇಲೆ ಬೇಸರ: ಪಕ್ಷದ ವಿವಿಧ ಹುದ್ದೆಗಳಿಗೆ ರಾಜೀನಾಮೆ!

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಮೇಲೆ ಬೇಸರ: ಪಕ್ಷದ ವಿವಿಧ ಹುದ್ದೆಗಳಿಗೆ ರಾಜೀನಾಮೆ!

Telegram Group
Join Now

ಕೊಪ್ಪ: ತಾಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಚಾಯತಿ ಮಟ್ಟದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಹಾಗೂ ಬೂತ್ ಅಧ್ಯಕ್ಷರಾದ ಜಗದೀಶ್ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಶಾಂತ್ ಶೆಟ್ಟಿಯವರು ಕಳೆದ 10 ವರ್ಷಗಳಿಂದ ಅತ್ತಿಕೊಡಿಗೆ ಪಂಚಾಯತಿ ಮಟ್ಟದ ಕಾಂಗ್ರೆಸ್ ಪಕ್ಷದ ಸಮಿತಿಯ ಅಧ್ಯಕ್ಷರಾಗಿ ಶಾಸಕರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಶಾಂತ್ ಶೆಟ್ಟಿ ಕೆಲವು ಅನಿವಾರ್ಯತೆ ಮತ್ತು ವೈಯಕ್ತಿಕ ಕಾರಣದಿಂದ ಜವಾಬ್ದಾರಿ ನಿಭಾಯಿಸಲು  ಕಷ್ಟವಾಗುತ್ತಿದೆ ಎಂದು ಕಾರಣ ನೀಡಿದ್ದಾರೆ ಆದರೆ ಅತ್ತಿಕೊಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಸಕರು ಅಭಿವೃದ್ಧಿ ಗೆ ಹಾಗೂ ಬೇಡಿಕೆಗಳನ್ನು ಈಡೇರಿಸದೆ ಇರುವುದೇ ರಾಜೀನಾಮೆಗೆ ಕಾರಣವಾಗಿರಬಹುದೆಂದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಆದರೆ ಜಗದೀಶ್ ಅವರು ಶಾಸಕರ ಮೇಲಿನ ಬೇಸರ ಮತ್ತು ನಿರ್ಲಕ್ಷವೇ ನನ್ನ ರಾಜೀನಾಮೆಗೆ ಕಾರಣ ಎಂದು ಪತ್ರದ ಮೂಲಕ ರಾಜೀನಾಮೆ ನೀಡಿದ್ದಾರೆ.

ಶಾಸಕರಿಗೆ ಹಲವು ಭಾರೀ ನಮ್ಮೂರಿನ ರಸ್ತೆಗೆ ಮನವಿ ಮಾಡಿದ್ದೆವು ಆದರೆ ಶಾಸಕರ ನಿರ್ಲಕ್ಷ ಮಾಡಿದ್ದಾರೆ.
ನಾನೊಬ್ಬ ಬೂತ್ ಮಟ್ಟದ ಅಧ್ಯಕ್ಷನಾಗಿ ನನ್ನ ಮಾತಿಗೆ ಬೆಲೆ ಇಲ್ಲದಿರುವಾಗ ನಾನು ನಮ್ಮ ಬೂತಿನ ಇತರ ಗ್ರಾಮಗಳ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಿ ಎಂದು ಶೃಂಗೇರಿ ಕ್ಷೇತ್ರದ ಶಾಸಕರಾದ ಟಿಡಿ ರಾಜೇಗೌಡ ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!