Friday, November 6, 2026
Homeಕ್ರೈಮ್ಚಿಕ್ಕಮಗಳೂರು ನಗರದಲ್ಲಿ ಸಂಚರಿಸಿದ ದಾವೂದ್ ಇಬ್ರಾಹಿಂ ಹೆಸರಿನ ಬಸ್: ಪೊಲೀಸರಿಂದ ಸೀಜ್!

ಚಿಕ್ಕಮಗಳೂರು ನಗರದಲ್ಲಿ ಸಂಚರಿಸಿದ ದಾವೂದ್ ಇಬ್ರಾಹಿಂ ಹೆಸರಿನ ಬಸ್: ಪೊಲೀಸರಿಂದ ಸೀಜ್!

Telegram Group
Join Now

ಚಿಕ್ಕಮಗಳೂರು: ಉಗ್ರ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ಬರಹಗಳನ್ನು ಹೊಂದಿದ್ದ ಕೇರಳ ಮೂಲದ ಖಾಸಗಿ ಪ್ರವಾಸಿ ಬಸ್ಸೊಂದನ್ನು ಪೊಲೀಸರು ನಗರದ ಬೋಳರಾಮೇಶ್ವರ ದೇವಾಲಯದ ಬಳಿ ವಶಕ್ಕೆ ಪಡೆದಿದ್ದಾರೆ.‌

ಕೇರಳದಿಂದ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಈ ಬಸ್ಸಿನ ಮೇಲೆ ರೈಸ್ ಆಫ್ ಅ ಡಾನ್ ಸೇರಿದಂತೆ ದಾವೂದ್ ಇಬ್ರಾಹಿಂನನ್ನು ಹೊಗಳುವ ಹಲವಾರು ಬರಹಗಳನ್ನು ಬರೆಯಲಾಗಿತ್ತು. ಈ ಬರಹಗಳನ್ನು ಗಮನಿಸಿದ ಹಿಂದೂಪರ ಸಂಘಟನೆಗಳು ಬಸ್ಸನ್ನು ತಡೆದು ಚಾಲಕ ಸೇರಿ ಮಾಲೀಕರ ವಿರುದ್ಧ FIR ದಾಖಲು ‌ಮಾಡುವಂತೆ ಪಟ್ಟು ಹಿಡಿದಿದ್ದಾರೆ.

6 ತಿಂಗಳ ಹಿಂದೆಯೂ ತಮಿಳುನಾಡಿನಿಂದ ಇದೇ ರೀತಿಯ ಬಸ್ ಬಂದಿತ್ತು ಇದೀಗ ಕೇರಳ ಮೂಲದ ಬಸ್‌ನಲ್ಲೂ ದಾವೂದ್ ವೈಭವೀಕರಣ ಬರಹ ಹೀಗಾಗಿ ಪೊಲೀಸ್ ಇಲಾಖೆಯ ಭದ್ರತಾ ವೈಫಲ್ಯದ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಿಡಿ ಕಾರಿದೆ.

ಹತ್ತಾರು ಚೆಕ್‌ಪೋಸ್ಟ್‌ಗಳನ್ನು ದಾಟಿ ಬಸ್ ಹೇಗೆ ಬಂತೆಂದು ಬಿಜೆಪಿ ಯುವ ಮೋರ್ಚಾ ಪ್ರಶ್ನೆ ಮಾಡಿದ್ದು ದೇಶದ್ರೋಹಿ ಕೃತ್ಯಗಳನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಪಡಿಸಿದ್ದುಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!