Sunday, November 8, 2026
Homeಕ್ರೈಮ್ದೇವೀರಮ್ಮನ ಬೆಟ್ಟ ಏರುವಾಗ ಹೃದಯಾಘಾತದಿಂದ ಯುವಕ ಸಾವು

ದೇವೀರಮ್ಮನ ಬೆಟ್ಟ ಏರುವಾಗ ಹೃದಯಾಘಾತದಿಂದ ಯುವಕ ಸಾವು

Telegram Group
Join Now

ಚಿಕ್ಕಮಗಳೂರು:  ಜಿಲ್ಲೆಯ ಪ್ರಸಿದ್ಧ ಶಕ್ತಿ ದೇವತೆ ದೇವೀರಮ್ಮನ ಬೆಟ್ಟವನ್ನು ಏರುವಾಗ ತೀವ್ರ ಹೃದಯಾಘಾತ ಸಂಭವಿಸಿ ಭಕ್ತರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಕನ್ಯಾಡಿ ನಿವಾಸಿ 32 ವರ್ಷದ ಲಕ್ಷ್ಮಣ್ ಎಂದು ಗುರುತಿಸಲಾಗಿದೆ.

ದೇವರ ದರ್ಶನದ ಹಂಬಲದಿಂದ ಶ್ರದ್ಧಾಭಕ್ತಿಗಳಿಂದ ದೇವೀರಮ್ಮನ ಬೆಟ್ಟವನ್ನು ಹತ್ತುತ್ತಿದ್ದ ವೇಳೆ ಲಕ್ಷ್ಮಣ್ ಅವರಿಗೆ ಏಕಾಏಕಿ ಹಾರ್ಟ್ ಅಟ್ಯಾಕ್ ಆಗಿದೆ ಎನ್ನಲಾಗಿದ್ದು. ಬೆಟ್ಟ ಏರುವಾಗಲೇ ಅವರು ದಿಢೀರನೆ ಕುಸಿದು ಬಿದ್ದಿದ್ದು, ದುರಾದೃಷ್ಟವಶಾತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ದೇವರ ದರ್ಶನಕ್ಕೆಂದು ಉತ್ಸಾಹದಿಂದ ಆಗಮಿಸಿದ್ದ ಯುವಕ ಮಾರ್ಗಮಧ್ಯೆಯೇ ಸಾವನ್ನಪ್ಪಿರುವುದು ಬೇಸರ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!