ಹಾಸನ : ಹಾಸನಾಂಬೆ ದೇವಿ ದರ್ಶನದ ಭದ್ರತೆ ವೇಳೆ ಕಂದಾಯ ಇಲಾಖೆ ಅಧಿಕಾರಿ & ಪೊಲೀಸ್ ಆಫೀಸರ್ ಮಧ್ಯೆ ವಾಗ್ವಾದ ನಡೆದಿದೆ.
ಉತ್ಸವ ಶುರುವಾದಾಗಿನಿಂದ ಕಂದಾಯ ಇಲಾಖೆ ವರ್ಸಸ್ ಪೊಲೀಸ್ ಇಲಾಖೆ ಎನ್ನುವಂತಾಗಿದ್ದು ಆಫೀಸರ್ಸ್ ಮಧ್ಯೆ ಆಗಾಗ ಮಾತಿನ ಚಕಮಕಿ ನಡೆಯುತ್ತಲೇ ಇದೆ. ದೇಗುಲದ ಆಸ್ತಿ, ವ್ಯವಸ್ಥೆ ನಿರ್ವಹಣೆ ನಮ್ಮ ಜವಾಬ್ದಾರಿ ಅಂತಾ ಕಂದಾಯ ಅಧಿಕಾರಿಗಳ ವಾದವಾದ್ರೆ ಕಾನೂನು-ಸುವ್ಯವಸ್ಥೆ ನಮ್ಮದು ಅಂತಾ ಪೊಲೀಸರ ಪ್ರತಿವಾದಗಿದೆ.
ಇದೇ ವಿಚಾರಕ್ಕೆ ಸಕಲೇಶಪುರ ಡಿವೈಎಸ್‌ಪಿ ಮಾಲತೇಶ್ ಹಾಗೂ ಹಾಸನ ತಹಸೀಲ್ದಾರ್ ಗೀತಾ ಏರು ಧ್ವನಿಯಲ್ಲಿ ಭಕ್ತರ ಎದುರೇ ಕಿತ್ತಾಡಿಕೊಂಡಿದ್ದಾರೆ. ಗೀತಾರಿಗೆ ‘ಯಾರಮ್ಮ ನೀನು?’ ಆಂತಾ ಡಿವೈಎಸ್‌ಪಿ ಏಕವಚನ ಸಂಭೋದಿಸಿದ್ದು, ಇದಕ್ಕೆ ಆಕ್ರೋಶಗೊಂಡ ತಹಶೀಲ್ದಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪರಿಣಾಮ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು.
