Wednesday, November 11, 2026
Homeಜಿಲ್ಲಾಸುದ್ದಿಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಮಲೆನಾಡಿನಲ್ಲಿ ವಿಶಿಷ್ಟ ಆಚರಣೆ: ಹಾಡನ್ನು ಹಾಡಿ ಬಲೀಂದ್ರನನ್ನು ಭೂಮಿಗೆ ಆಹ್ವಾನಿಸುವ ದಿನ!

ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಮಲೆನಾಡಿನಲ್ಲಿ ವಿಶಿಷ್ಟ ಆಚರಣೆ: ಹಾಡನ್ನು ಹಾಡಿ ಬಲೀಂದ್ರನನ್ನು ಭೂಮಿಗೆ ಆಹ್ವಾನಿಸುವ ದಿನ!

Telegram Group
Join Now

ಚಿಕ್ಕಮಗಳೂರು:  ಮಲೆನಾಡಿನಲ್ಲಿ ಬಲಿಪಾಡ್ಯಮಿಯನ್ನು ದೀಪಾವಳಿಯ ಅತ್ಯಂತ ಪ್ರಮುಖ ಮತ್ತು ಸಂಭ್ರಮದ ದಿನವನ್ನಾಗಿ ಆಚರಿಸಲಾಗುತ್ತದೆ.

ಹೌದು .. ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಮಲೆನಾಡಿನ ಸಾಂಪ್ರದಾಯಿಕ ಆಚರಣೆಯಂತೆ ಮನೆಗಳ ಮುಂದೆ, ಗದ್ದೆಗಳಲ್ಲಿ, ತೋಟಗಳಲ್ಲಿ, ದೇವಸ್ಥಾನಗಳ ಮುಂಭಾಗದಲ್ಲಿ ಹಾಗೂ ದನದ ಕೊಟ್ಟಿಗೆಗಳಲ್ಲಿ ವಿಶೇಷವಾಗಿ ಪಂಜುಗಳನ್ನು ಹಚ್ಚಿ, “ಹಾಲು ಹಳ್ಳವಾಗಿ, ಬೆಣ್ಣೆ ಬೆಟ್ಟವಾಗಿ, ಮಜ್ಜಿಗೆ ಹರ್ದೂರವಾಗಿ, ಹಟ್ಟಿತುಂಬಾ ದನವಾಗಿ, ಕೊಟ್ಟೆಗೆ ತುಂಬಾ ಕರುವಾಗಿ, ಆಳುದ್ದ ಪೈರ್ ಬೆಳೆದು, ತೋಳುದ್ದ ತೆನೆ ಬಿಟ್ಟು, ನೂರಕ್ಕೆ ನೂರು ಹುಲ್ಸ್ ಕೊಟ್ಕೊಂಡು ಬಾರೋ ಬಲಿಂದ್ರಾಯ ಕು.ಕು. ಕುಹಿ.” ಸಂಪ್ರದಾಯದ ಹಾಡನ್ನು ಹಾಡುತ್ತಾ ಬಲಿಚಕ್ರವರ್ತಿಯನ್ನು ಆಹ್ವಾನಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಲೆನಾಡಿನ ಮಣ್ಣಿನ ಸೊಗಡು, ಕೃಷಿ ಬದುಕಿನ ಸಮೃದ್ಧಿಯ ಆಶಯ, ದನಕರುಗಳ ಮೇಲಿನ ಪ್ರೀತಿ ಹಾಗೂ ನಮ್ಮ ಹಿರಿಯರು ಉಳಿಸಿ ಬೆಳೆಸಿಕೊಂಡು ಬಂದಿರುವ ಜಾನಪದ ಪರಂಪರೆಯ ಸೊಬಗನ್ನು ಸಾರುವ ವಿಶಿಷ್ಟ ಆಚರಣೆ ಇದು.ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಮಣ್ಣಿನ ಸೊಗಡು ಮುಂದಿನ ಪೀಳಿಗೆಗೂ ಹೀಗೆಯೇ ಉಳಿಯಲಿ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!