ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ನವೆಂಬರ್ 13ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ರಾಜ್ಯದಲ್ಲಿ (Karnataka) 15,000 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೋದಿ ಅವರು ಬೆಂಗಳೂರು(Bengaluru) ಮತ್ತು ಮೈಸೂರಿನಲ್ಲಿ (Mysuru) ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಮ್ಮ ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 10.05: ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮನ.
ಬೆಳಗ್ಗೆ 10.45: ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿ
ಮಧ್ಯಾಹ್ನ 12.40: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್. ಎ. ಮಂಡೂರ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಗೆ ಹೆಲಿಕಾಪ್ಟರ್ ಮೂಲಕ ಆಗಮನ.
ಮಧ್ಯಾಹ್ನ 12.45: ನಮ್ಮ ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ ಹಾಗೂ ತಾವರೆಕೆರೆಯಿಂದ ಐಐಎಂಬಿ (IIMB) ನಿಲ್ದಾಣದವರೆಗೆ ಮೆಟ್ರೋದಲ್ಲಿ ಸಂಚಾರ.
ಮಧ್ಯಾಹ್ನ 1.15: ಐಐಎಂಬಿ (IIMB) ಆಡಿಟೋರಿಯಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ.
ಮಧ್ಯಾಹ್ನ 2.00: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಬೆಂಗಳೂರು (ಯಶವಂತಪುರ) – ಮಂಗಳೂರು – ಮಡಗಾಂವ್ ವಂದೇ ಭಾರತ್ ರೈಲಿಗೆ ಚಾಲನೆ.
ಮಧ್ಯಾಹ್ನ 2.30: ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ.
ಮಧ್ಯಾಹ್ನ 3.30: ಮೈಸೂರಿನ ಕೆ.ಸಿ. ಲೇಔಟ್ ಪಾರ್ಕ್‌ನಲ್ಲಿ ‘ಭಾರತ್ ವ್ಯಾನ್’ ಕಾರ್ಯಕ್ರಮದಲ್ಲಿ ಭಾಗಿ.
ಸಂಜೆ 4.00: ಮೈಸೂರು ಕಾಸ್ಮಾಸ್ / ಪ್ಲಾನೆಟೋರಿಯಂ ಉದ್ಘಾಟನೆ.
ಸಂಜೆ 6.05: ಮೈಸೂರಿನಿಂದ ನೇರವಾಗಿ ದೆಹಲಿಗೆ ವಾಪಸ್ ಪ್ರಯಾಣ.
ಮೋದಿ ಅವರ ಭೇಟಿಯ ವೇಳೆ ಚಾಲನೆ ದೊರೆಯಲಿರುವ ಪ್ರಮುಖ ಯೋಜನೆಗಳ ವಿವರ
ಬೆಂಗಳೂರು ಮೆಟ್ರೋ:
ನಮ್ಮ ಮೆಟ್ರೋ ಹಂತ-2 (ಪಿಂಕ್ ಲೈನ್ – ಎಲಿವೇಟೆಡ್ ಮಾರ್ಗ): 3,470 ಕೋಟಿ ರೂ. ವೆಚ್ಚದ ಕಾಳೇನ ಅಗ್ರಹಾರದಿಂದ ಡೈರಿ ಸರ್ಕಲ್‌ವರೆಗಿನ ಮಾರ್ಗದ ಉದ್ಘಾಟನೆ.
