ಶೃಂಗೇರಿ: ಹಾಸನದ ಬೇಲೂರಿನಲ್ಲಿ ಇಬ್ಬರನ್ನ ಬಲಿ ಪಡೆದಿರೋ ಆನೆ ಹಿಂಡನ್ನ ಭದ್ರಾ ಅರಣ್ಯಕ್ಕೆ ಓಡಿಸಲಾಗ್ತಿದೆ. ಇದಕ್ಕೆ ರೈತ ಒಕ್ಕೂಟದ ವಿಶ್ವನಾಥ್ ಗದ್ದೆಮನೆ ಆಕ್ರೋಶ ಹೊರ ಹಾಕಿದ್ದಾರೆ. ಅಧಿಕಾರಿಗಳು ಇತ್ತ ಆನೆ ಓಡಿಸಲ್ಲ ಅಂತಾ ಆಶ್ವಾಸನೆ ಕೊಟ್ಟಿದ್ರು. ಆದ್ರೆ ಲಿಖಿತ ರೂಪದಲ್ಲಿ ಕೊಡದೆ ಕಾಡಾನೆಗಳನ್ನ ಮೂಡಿಗೆರೆಯತ್ತ ಓಡಿಸ್ತಿರೋದಕ್ಕೆ ಗದ್ದೆಮನೆ ತೀವ್ರವಾಗಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಾಡಾನೆಗಳನ್ನು ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಡೆಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಹಾಗೂ ಮಲೆನಾಡಿನ ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಈಗಾಗಲೇ ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ (ಎನ್.ಆರ್. ಪುರ) ಭಾಗಗಳಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಪ್ರಾಣ ಮತ್ತು ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಬೇಲೂರಿನ ಆನೆಗಳನ್ನು ಮೂಡಿಗೆರೆಯತ್ತ ಓಡಿಸಿದರೆ ಮಲೆನಾಡಿನ ಜನರ ಬದುಕು ಮತ್ತಷ್ಟು ದುಸ್ತರವಾಗಲಿದೆ ಎಂದಿದ್ದಾರೆ.
