ಬೆಂಗಳೂರು: ಹಾಸನ ಹಾಗೂ ಚಿಕ್ಕಮಗಳೂರು ವಿಭಾಗದಲ್ಲಿ ಮಾನವ-ಆನೆ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಆನೆಗಳ ಸ್ಥಳಾಂತರ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಹೌದು ..ರಾಜೀನಾಮೆ ಎಚ್ಚರಿಕೆ ಕೊಟ್ಟಿದ್ದ ಚಿಕ್ಕಮಗಳೂರಿನ ಮೂವರು ಶಾಸಕರಿಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಖಡಕ್ ಕೌಂಟರ್ ಕೊಟ್ಟಿದ್ದಾರೆ. ಆನೆಗಳನ್ನ ಎಲ್ಲಿ ಬಿಡಬೇಕೆಂದು ಶಾಸಕರೇ ಹೇಳಲಿ. ಸರ್ಕಾರ ಅದರಂತೆ ಕ್ರಮ ಕೈಗೊಳ್ಳಲಿದೆ ಅಂತಾ ಚಾಲೆಂಜ್ ಮಾಡಿದ್ದಾರೆ.
ಬೇಲೂರು ಹಾಗೂ ಚಿಕ್ಕಮಗಳೂರಿನ ಜನರಿಗೆ ತೊಂದ್ರೆ ಆಗದಂತೆ ಕಾಡಾನೆಗಳ ಸಮಸ್ಯೆಗೆ ಶಾಸಕರೇ ಪರಿಹಾರ ಸೂಚಿಸಲಿ. ಬೇಲೂರಲ್ಲಿ 12 ಸಾವಿರ ಎಕರೆ ಅರಣ್ಯ ಚುದುರಿ ಹೋಗಿದೆ. ಆದ್ರೆ ಭದ್ರಾ ಅರಣ್ಯ 1.41 ಎಕರೆ ವಿಸ್ತೀರ್ಣದಲ್ಲಿದೆ. 2019ರಲ್ಲಿ 7 ಆನೆಗಳಿದ್ವು. ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ.
ಹೀಗಾಗಿ ಶಾಸಕರೇ ಸಲ್ಯೂಷನ್ ನೀಡಲಿ ಅಂತಾ ಪರೋಕ್ಷವಾಗಿ ಸವಾಲು ಹಾಕಿದ್ದಾರೆ. ಇನ್ನು ಬೇಲೂರಿನಿಂದ ಭದ್ರಾ ಅರಣ್ಯಕ್ಕೆ ಆನೆಗಳನ್ನ ಡ್ರೈವ್ ಮಾಡ್ತಿರೋದನ್ನ ವಿರೋಧಿಸಿ ಶಾಸಕರಾದ ತಮ್ಮಯ್ಯ, ರಾಜೇಗೌಡ, ನಯನ ಭಾನುವಾರ ಪ್ರೆಸ್ಮೀಟ್ ಮಾಡಿ ರಾಜೀನಾಮೆ ನೀಡೋ ಎಚ್ಚರಿಕೆ ಕೊಟ್ಟಿದ್ದರು.
