ಬೆಂಗಳೂರು (ಮೇ 6) :ಮೂರು ತಿ೦ಗಳ ವೇತನ ಬಾಕಿ ಬಿಡುಗಡೆಗೆ ಆಗ್ರಹಿಸಿ 108 ಆ್ಯಂಬುಲೆನ್ಸ್ ನೌಕರರು ಕಳೆದ ಹಲವಾರು ದಿನಗಳಿ೦ದ ಪ್ರತಿಭಟನೆ ಮಾಡುತ್ತಿದ್ದರು. ಇಷ್ಟು ದಿನದಿ೦ದ ಪ್ರತಿಭಟನೆ ಮಾಡುತ್ತಿದ್ದರೂ ಯಾವೊಬ್ಬ ಸರ್ಕಾರದ ಅಧಿಕಾರಿಯಾಗಲಿ ಅಥವಾ ಜಿವಿಕೆ ಸಂಸ್ಥೆಯಾಗಲಿ ಇವರ ಸಮಸ್ಯೆಯನ್ನ ಬಗೆಹರಿಸಿರಲಿಲ್ಲ. ಹೀಗಾಗಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 108 ಆ್ಯಂಬುಲೆನ್ಸ್ ಸಿಬ್ಬ೦ದಿ ಇವತ್ತು ರಾತ್ರಿಯಿಂದ ರಾಜ್ಯದಾದ್ಯ೦ತ ಸೇವೆಯನ್ನ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
GVK ಯಿಂದ 108 ನೌಕರರಿಗೆ , ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಅರ್ಧದಷ್ಟು ಮಾತ್ರ ಸಂಬಳ ನೀಡಿದ್ದು, ಮೂರು ತಿಂಗಳ ಪೂರ್ಣ ವೇತನ ನೀಡಿಲ್ಲ ಅನ್ನೋ ಆರೋಪವಿದೆ . ಈ ಹಿನ್ನೆಲೆಯಲ್ಲಿ ಇಂದು ರಾತ್ರಿ 8ರಿಂದ ರಾಜ್ಯಾದ್ಯಂತ ಆ್ಯಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಲು ಸಿಬ್ಬಂದಿ ನಿರ್ಧರಿಸಿದ್ದಾರೆ.
ಈ ಬಗ್ಗೆ ಆರೋಗ್ಯ ಇಲಾಖೆ ಉಪನಿರ್ದೇಶರಾದ ಪ್ರಭು ಗೌಡ ನೇತೃತ್ವದಲ್ಲಿ ಆ್ಯಂಬುಲೆನ್ಸ್ ಸಂಘದ ಜೊತೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ನೌಕರರ ಪರವಾದ ನಿರ್ಧಾರ ಕೈಗೊಂಡರೆ ಮಾತ್ರ ತಮ್ಮ ಸೇವೆಯನ್ನ ಮುಂದುವರಿಸುತ್ತೇವೆ ಅಂತ 108 ಆ್ಯಂಬುಲೆನ್ಸ್‌ನೌಕರರ ಸಂಘದ ಉಪಾಧ್ಯಕ್ಷ ಪರಮಶಿವಯ್ಯ ಹೇಳಿದ್ದಾರೆ. ಒಂದು ವೇಳೆ ತಮ್ಮ ಬೇಡಿಕೆ ಈಡೇರದಿದ್ದರೆ ಆ೦ಬ್ಯುಲನ್ಸ್ ಕರ್ತವ್ಯಕ್ಕೆ ಹಾಜರಾಗ್ತೀವಿ ಆದರೆ ಯಾವುದೇ ಕೇಸ್ ಅಟೆಂಡ್ ಮಾಡದಿರಲು ಸಿಬ್ಬಂದಿ ನಿರ್ಧಾರ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
