Wednesday, November 25, 2026
Homeಗ್ರೇಟರ್ ಬೆಂಗಳೂರುಕಾಫಿನಾಡಲ್ಲಿ ಕಾಡಾನೆ ಕಿಚ್ಚು: ಸ್ಪೀಕರ್ ಭೇಟಿ ಮಾಡಿದ ಚಿಕ್ಕಮಗಳೂರಿನ ಮೂವರು ಶಾಸಕರು, ರಾಜೀನಾಮೆ ಬಗ್ಗೆ...

ಕಾಫಿನಾಡಲ್ಲಿ ಕಾಡಾನೆ ಕಿಚ್ಚು: ಸ್ಪೀಕರ್ ಭೇಟಿ ಮಾಡಿದ ಚಿಕ್ಕಮಗಳೂರಿನ ಮೂವರು ಶಾಸಕರು, ರಾಜೀನಾಮೆ ಬಗ್ಗೆ ಚರ್ಚೆ!

Telegram Group
Join Now

ಚಿಕ್ಕಮಗಳೂರು: ಹಾಸನದ ಬೇಲೂರು ಭಾಗದಿಂದ ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಭದ್ರಾ ಅಭಯಾರಣ್ಯ ಭಾಗಕ್ಕೆ ಕಾಡಾನೆಗಳನ್ನು  ಅಟ್ಟಿರುವುದಕ್ಕೆ ಸ್ಥಳೀಯ ಶಾಸಕರ ವಿರೋಧ ಮುಂದುವರಿದಿದೆ. ಇದೇ ವಿಚಾಕ್ಕೆ ಸಂಬಂಧಿಸಿದಂತೆ ಮೂವರು ಸ್ಥಳೀಯ ಶಾಸಕರು ಸ್ಪೀಕರ್ ಭೇಟಿಗೆ ಬಂದಿದ್ದು, ರಾಜೀನಾಮೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು ಕಾಂಗ್ರೆಸ್  ಶಾಸಕ ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಅವರು ಸ್ಪೀಕರ್‌ ಜಿ.ಎಸ್ ಪಾಟೀಲ್ ಅವರನ್ನು ಭೇಟಿಗೆ ಬಂದಿದ್ದಾರೆ. ಈ ಮೂವರು ಶಾಸಕರು ಆನೆಗಳ ಸಮಸ್ಯೆಯಿಂದಾಗಿ ರಾಜೀನಾಮೆಗೆ ಮುಂದಾಗಿದ್ದರು. ಸಿಎಂ ಡಿ.ಕೆ ಶಿವಕುಮಾರ್‌ ಅವರ ಮನವೊಲಿಕೆ ನಂತರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಈಗ ಮೂವರು ಶಾಸಕರು ಸ್ಪೀಕರ್ ಕಚೇರಿಗೆ ಆಗಮಿಸಿದ್ದು, ಆನೆ ಸ್ಥಳಾಂತರದ ವಿಚಾರ ಹಾಗೂ ರಾಜೀನಾಮೆ ಸಂಬಂಧ ಚರ್ಚೆ ನಡೆಸುತ್ತಿದ್ದಾರೆ

ಈ ಬಗ್ಗೆ ಮಾತನಾಡಿರುವ ಶಾಸಕಿ ನಯನ ಮೊಟಮ್ಮ ಅವರು, ಮುಖ್ಯಮಂತ್ರಿಯವರು ನಮ್ಮ ಜೊತೆ ಮಾತನಾಡಿದ್ದಾರೆ. ನನ್ನ ಜೊತೆ ಮೆಸೆಜ್ ಕೂಡ ಮಾಡಿದ್ದಾರೆ. ನನ್ನ ಆಕ್ಷೇಪ, ಬೇಜಾರನ್ನು ನಾನು ವ್ಯಕ್ತಪಡಿಸಿದ್ದೇನೆ. ಇದರಿಂದ ಕಾರ್ಯಾಚರಣೆ ನಿಲ್ಲಿಸಿದ್ದಾರೆ.

ನನಗೆ ಯಾವುದೇ ಪಬ್ಲಿಸಿಟಿ ಅವಶ್ಯಕತೆ ಇಲ್ಲ. ನನ್ನ ಮೂಡಿಗೇರೆ ಕ್ಷೇತ್ರದ ಜನರಿಗೆ ತೊಂದರೆ ಆದರೆ ಯಾರು ಜವಾಬ್ದಾರಿ ಹೊರುತ್ತಾರೆ. ಆನೆ ತುಳಿತದಿಂದ ಆಪಾಯ ಆದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಈಗ ಕಾಫಿ ಕೊಯ್ಲು ಸೀಜನ್‌ ಈ ಆನೆಗಳಿಂದ ಸಮಸ್ಯೆ ಆದರೆ ಯಾರು ಹೊಣೆ? ಬೇಳೆ ನಾಶವಾದರೆ ಆ ಬೇಳೆ ಯಾರು ಪರಿಹಾರ ಕೊಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!