Tuesday, August 11, 2026
Homeಕ್ರೈಮ್ಕಾಫಿ ತೋಟಕ್ಕೆ ಶಿಕಾರಿಗೆ ಹೋದವನೇ ಶಿಕಾರಿಯಾದ: ಹಂದಿ ಬೇಟೆಗೆ ಹೋಗಿ ಯುವಕ ಸಾವು

ಕಾಫಿ ತೋಟಕ್ಕೆ ಶಿಕಾರಿಗೆ ಹೋದವನೇ ಶಿಕಾರಿಯಾದ: ಹಂದಿ ಬೇಟೆಗೆ ಹೋಗಿ ಯುವಕ ಸಾವು

Telegram Group
Join Now

ಚಿಕ್ಕಮಗಳೂರು ಜಿಲ್ಲೆಯ ಉಳುವಾಗಿಲು ಗ್ರಾಮದ ಕಾಫಿತೋಟದಲ್ಲಿ ಶಿಕಾರಿಗೆ ತೆರಳಿದ್ದ ಯುವಕನೊಬ್ಬ ತಾನೇ ಶಿಕಾರಿಯಾಗಿರೋ ಘಟನೆ ನಡೆದಿದೆ. ರಾತ್ರಿ ಹಂದಿ ಬೇಟೆಗೆ ಅಂತ ಹೋಗಿದ್ದ 33 ವರ್ಷದ ಸಂಜು ಆಕಸ್ಮಿಕವಾಗಿ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಮೇ.17 ರ ರಾತ್ರಿ ನಡೆದಿದೆ ಎನ್ನಲಾಗಿದೆ. ಕೆರೆಮಕ್ಕಿ ಗ್ರಾಮದ 33 ವರ್ಷದ ಸಂಜು ಮೃತ ಯುವಕ ಎಂದು ಗುರುತಿಸಲಾಗಿದೆ.

ಹಂದಿ ಬೇಟೆಗೆ ತೆರಳಿದ್ದ ಯುವಕರ ಗುಂಪು , ಹಂದಿಯನ್ನು ಕಂಡ ತಕ್ಷಣ ಗುರಿ ಇಟ್ಟಿದ್ದಾರೆ. ಆದರೆ ಈ ವೇಳೆ ಹಾರಿಸಿದ ಗುಂಡು ಮಿಸ್ ಆಗಿ ಸಂಜು ಎದೆ ಭಾಗಕ್ಕೆ ತಗುಲಿದೆ . ಪರಿಣಾಮವಾಗಿ ಸಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ, ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆಯನ್ನು ನಡೆಸುತ್ತಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments