ಕೊಪ್ಪ: ಕರ್ನಾಟಕ ಸರ್ಕಾರದ ಜನಪ್ರಿಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರ ಕನಸಿನ ಯೋಜನೆಯಾದ ಭಾರತ್ ಜೋಡೋ ಯುವಕ ಸಂಘ ಕೊಪ್ಪ ತಾಲೂಕಿನಲ್ಲಿ ಸಮರ್ಪಕವಾಗಿ ಜಾರಿ ಗೊಳಿಸಲು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಓಣಿತೋಟ ರತ್ನಾಕರ್ ಅವರು ಕೋರಿದ್ದಾರೆ.
ಹೌದು .. ಶೃಂಗೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ ಡಿ ರಾಜೇಗೌಡರವರ ಮಾರ್ಗದರ್ಶನದಂತೆ ತಾಲ್ಲೂಕು ಗ್ಯಾರಂಟಿ ಸಮಿತಿಯ ಸದಸ್ಯರ ಉಸ್ತುವಾರಿಯಲ್ಲಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಅಧಿಕಾರಿಗಳ ನೇಮಕ ಮಾಡಿ ಎಂದು ತಿಳಿಸಿದ್ದಾರೆ.
1 ವಾರದೊಳಗೆ ಯುವಕ ಸಂಘವನ್ನು ರಚನೆ ಮಾಡುವ ಉದ್ದೇಶದಿಂದ ಇಂದಿನ ಸಭೆಯ ತೀರ್ಮಾನದಂತೆ ಈ ಕೆಳಕಂಡ ಗ್ರಾಮ ಪಂಚಾಯಿತಿಗಳಿಗೆ ಕೆಳಕಂಡ ಗ್ಯಾರೆಂಟಿ ಸಮಿತಿ ಸದಸ್ಯರುಗಳು ಹಾಗೂ ಅಧಿಕಾರಿಗಳ ಪಟ್ಟಿ ಈ ಕೆಳಕಂಡಂತಿದ್ದು ಸಂಭಂದಪಟ್ಟ ಗ್ಯಾರೆಂಟಿ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಕೂಡಲೆ ಈ ನಿಟ್ಟಿನಲ್ಲಿ ಸಂಘಗಳನ್ನು ರಚನೆ ಮಾಡುವಂತೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ
ಓಣಿತೋಟ ರತ್ನಾಕರ್ ಅವರು ಮನವಿ ಮಾಡಿದ್ದಾರೆ.
