Friday, September 25, 2026
Homeಕರ್ನಾಟಕಮಲೆನಾಡಲ್ಲಿ ನಿಲ್ಲದ ಕಾಡಾನೆಗಳ ಆರ್ಭಟ: ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ, ವಾಹನ ಸವಾರರಲ್ಲಿ ಆತಂಕ!

ಮಲೆನಾಡಲ್ಲಿ ನಿಲ್ಲದ ಕಾಡಾನೆಗಳ ಆರ್ಭಟ: ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ, ವಾಹನ ಸವಾರರಲ್ಲಿ ಆತಂಕ!

Telegram Group
Join Now

ಚಿಕ್ಕಮಗಳೂರು : ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ.

ಚಿಕ್ಕಮಗಳೂರು ತಾಲೂಕಿನ ಬಸವರಹಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ರಾಜಾರೋಷವಾಗಿ ಹೆಜ್ಜೆ ಹಾಕಿದೆ.ರಸ್ತೆಯನ್ನು ದಾಟಿ ಪಕ್ಕದಲ್ಲಿದ್ದ ಕಾಫಿ ತೋಟಕ್ಕೆ ನುಗ್ಗಲು ಮುಂದಾದ ಈ ಬೃಹತ್ ಆನೆ, ತೋಟದ ರಕ್ಷಣೆಗೆ ಹಾಕಲಾಗಿದ್ದ ಸೋಲಾರ್ ಬೇಲಿಯತ್ತ ತೆರಳಿ ಮುಂಭಾಗದ ಕಾಲುಗಳಿಂದ ತಂತಿಯನ್ನು ಬಲವಾಗಿ ನೂಕಿ ಬೇಲಿ ಮುರಿಯಲು ಸತತ ಕಸರತ್ತು ನಡೆಸಿದೆ.

ಆದರೆ ಸೋಲಾರ್ ಬೇಲಿ ಭದ್ರವಾಗಿದ್ದರಿಂದ ಹಾಗೂ ಶಾಕ್ ಹೊಡೆದ ಪರಿಣಾಮ ಗಜರಾಜನ ಪ್ಲಾನ್ ಸಂಪೂರ್ಣ ಉಲ್ಟಾ ಆಗಿದೆ. ಎಷ್ಟೇ ಪ್ರಯತ್ನಿಸಿದರೂ ತೋಟದೊಳಗೆ ಕಾಲಿಡಲು ಸಾಧ್ಯವಾಗದಿದ್ದಾಗ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸೋಲಾರ್ ಬೇಲಿಯಿಂದ ಹಿಂದೆ ಸರಿದು ಮತ್ತೆ ಹೆದ್ದಾರಿಯಲ್ಲೇ ಹೆಜ್ಜೆ ಹಾಕಿ ವಾಪಸ್ ತೆರಳಿದೆ.

ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಸವಾರರೊಬ್ಬರು ಈ ಇಡೀ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಸಾಗುವ ಪ್ರಮುಖ ರಸ್ತೆಯಲ್ಲೇ ಒಂಟಿಸಲಗ ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಹಾಗೂ ಕಾಫಿ ಬೆಳೆಗಾರರು ತೀವ್ರ ಆತಂಕಗೊಂಡಿದ್ದು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!