ಮಂಡ್ಯ : ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ & ಜೆಡಿಎಸ್ ಮೈತ್ರಿಗೆ ಗೆಲುವಾಗಿದೆ. ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ್, ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಗೆಲುವು ಸಾಧಿಸಿದ್ದಾರೆ.
35 ಸದಸ್ಯರ ಬಲದ ಮಂಡ್ಯ ನಗರಸಭೆಯಲ್ಲಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ ಇಬ್ಬರು, ಐದು ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಈ ನಡುವೆ ಆಪರೇಷನ್ ಹಸ್ತದ ಫಲವಾಗಿ ಜೆಡಿಎಸ್‌ನ ಇಬ್ಬರು ಸದಸ್ಯರನ್ನು ಸೆಳೆದು ಅಧಿಕಾರಕ್ಕೇರುವ ಯೋಚನೆಯಲ್ಲಿ ಕಾಂಗ್ರೆಸ್ ಇತ್ತು. ಆದ್ರೆ ಇದಕ್ಕೆ ಸೆಡ್ಡು ಹೊಡೆದ ಹೆಚ್.ಡಿ. ಕುಮಾರಸ್ವಾಮಿ ರಿವರ್ಸ್ ಆಪರೇಷನ್ ಮಾಡಿ ಕಾಂಗ್ರೆಸ್‌ನ ಒಬ್ಬ ಸದಸ್ಯನನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ನಗರಸಭೆ ಆವರಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
35 ಸದಸ್ಯರ ಬಲ ಹೊಂದಿರುವ ಮಂಡ್ಯ ನಗರಸಭೆಯಲ್ಲಿ ಸಂಸದ 1, ಶಾಸಕ 1 ಸೇರಿ 37 ಜನರಿಗೆ ಮತದಾನದ ಹಕ್ಕು ಇತ್ತು. ಜೆಡಿಎಸ್ 18 ಸದಸ್ಯರು, ಬಿಜೆಪಿಯ 2, ಕಾಂಗ್ರೆಸ್‌ನ 10, ಪಕ್ಷೇತರ 5 ಸದಸ್ಯರು ಮತ ಹಕ್ಕ ಹೊಂದಿದ್ದರು.
ಆಪರೇಷನ್ & ರಿವರ್ಸ್ ಆಪರೇಷನ್ ಎಫೆಕ್ಟ್‌ನಿಂದಾಗಿ ಜೆಡಿಎಸ್ 15+, ಬಿಜೆಪಿ 2+, ಕಾಂಗ್ರೆಸ್‌ನಿಂದ ಅಪರೇಷನ್ 1+, ಸಂಸದ 1 ಸೇರಿ ಒಟ್ಟು 19 ಮತ ಗಳಿಸಿತು. ಕಾಂಗ್ರೆಸ್ 9+, ಪಕ್ಷೇತರ 5+, ಜೆಡಿಎಸ್‌ನಿಂದ ಅಪರೇಷನ್ 3+, ಶಾಸಕ 1 ಸೇರಿ 18 ಮತ ಪಡೆದಿದೆ.



