ಬೆಂಗಳೂರು : ತಿರುಪತಿ ತಿರುಮಲ ದೇವಸ್ಥಾನಕ್ಕೆ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ಪ್ರಸಾದಕ್ಕೆ ನಮ್ಮ ನಂದಿನಿ ತುಪ್ಪವನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯದಿಂದ ಸರಬರಾಜು ಮಾಡುವ ತುಪ್ಪದ ಟ್ಯಾಂಕರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣದಲ್ಲಿ ಚಾಲನೆ ನೀಡಿದರು.
KMF ಅಧ್ಯಕ್ಷ ಭೀಮಾನಾಯಕ್, KMF MD ಜಗದೀಶ್ ಸೇರಿ ಹಲವರು ಈ ಸಂದರ್ಭ ಇದ್ದರು.





