Sunday, September 27, 2026
Homeಜಿಲ್ಲಾಸುದ್ದಿಆಕಾಶ ನೋಡಿ ʼಕೋರ್ಟ್‌ ಏನೇ ಕೊಟ್ಟರೂ ದೇವರ ಪ್ರಸಾದ ಅಂತ ಸ್ವೀಕಾರ ಮಾಡ್ತೇನೆʼ ಎಂದ ಡಿಸಿಎಂ...

ಆಕಾಶ ನೋಡಿ ʼಕೋರ್ಟ್‌ ಏನೇ ಕೊಟ್ಟರೂ ದೇವರ ಪ್ರಸಾದ ಅಂತ ಸ್ವೀಕಾರ ಮಾಡ್ತೇನೆʼ ಎಂದ ಡಿಸಿಎಂ DKS

Telegram Group
Join Now

ಪಬ್ಲಿಕ್‌ ಇಂಪ್ಯಾಕ್ಟ್‌ ಹಾಸನ : ತಮ್ಮ ವಿರುದ್ದ ಹೈಕೋರ್ಟ್‌ನಲ್ಲಿ ಇಂದು ತೀರ್ಪು ವಿಚಾರವಾಗಿ ʼನನಗೆ ದೇವರು, ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ಕೋರ್ಟ್‌ ಏನು ಕೊಟ್ಟರೂ ಪ್ರಸಾದ ಅಂತ ಸ್ವೀಕಾರ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದರು.
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಮಾತನಾಡಿದರು. ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರ ಸಮ್ಮತಿ ಸಂಬಂಧ ಹೈಕೋರ್ಟ್‌ನಲ್ಲಿ ಇಂದು ಆದೇಶ ಸಂಬಂಧ ಪ್ರತಿಕ್ರಿಯಿಸಿ, ಅವರಿಗೆ ಏನು ಆಗುವುದಿಲ್ಲ, ಇದು ಅಷ್ಟು ಸುಲಭವಾದ ಕೆಲಸವಲ್ಲ. ಅವರು ಏನಾದರೂ ಸಹಿ ಮಾಡಿ, ತಪ್ಪು ಮಾಡಿದ್ರೆ ಪರ್ವಾಗಿಲ್ಲ. ಜಮೀನು ಕಳೆದುಕೊಂಡಿದ್ದಾರೆ, ಅರ್ಜಿ ಹಾಕಿದ್ದಾರೆ. ಬಿಜೆಪಿಯವರು ಅರ್ಜಿ ಪಡೆದುಕೊಂಡು ಸೈಟ್ ಕೊಟ್ಟಿದ್ದಾರೆ. ಅಷ್ಟು ಬಿಟ್ಟರೆ ಇನ್ನೇನಿದೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಪುತ್ರ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಅವರಿಗೆಲ್ಲಾ, ಆ ನಕಲಿಗೆಲ್ಲಾ ಉತ್ತರ ಕೊಡಲ್ಲ. ಅಸಲಿಯತ್ತು ಮಾತ್ರ ನಾನು ಕೊಡ್ತಿನಿ ಅಂತ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!