Wednesday, February 11, 2026
Homebig breakingಗರ್ಲ್‌ ಫ್ರೆಂಡ್‌ ಇಲ್ಲ ಅಂತ ಡೆತ್‌ ನೋಟ್‌ ಬರೆದು ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ..!

ಗರ್ಲ್‌ ಫ್ರೆಂಡ್‌ ಇಲ್ಲ ಅಂತ ಡೆತ್‌ ನೋಟ್‌ ಬರೆದು ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ..!

ಶಿವಮೊಗ್ಗ : ವಾಟ್ಸಪ್‌ ಸ್ಟೇಟಸ್‌ನಲ್ಲಿ ಡೆತ್‌ ನೋಟ್‌ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಇಂದಾವರ ಗ್ರಾಮದ ಜಯದೀಪ್‌(24) ಮೃತ ಯುವಕ. ಸ್ಮಶಾನಕಟ್ಟೆ ಬಳಿ ತುಂಗಾ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೂರು ಪುಟದ ಡೆತ್‌ ನೋಟ್‌ ಅನ್ನು ವಾಟ್ಸಪ್‌ ಸ್ಟೇಟಸ್‌ಗೆ ಅಪ್‌ಲೋಡ್‌ ಮಾಡಿ ನಾಪತ್ತೆಯಾಗಿದ್ದ. ನನಗಿಂತ ಸಣ್ಣ ವಯಸ್ಸಿನ ಹುಡುಗರಿಗೆಲ್ಲ ಗರ್ಲ್‌ ಫ್ರೆಂಡ್ಸ್‌ ಇದ್ದಾರೆ. ಆದರೆ ನನಗೆ ಈವರೆಗೆ ಯಾರೂ ಹುಡ್ಗಿ ಸಿಕ್ಕಿಲ್ಲ. ಆನ್ನೈನ್ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದೇನೆ ಎಂದೆಲ್ಲ ತನ್ನ ಅಳಲು ತೋಡಿಕೊಂಡಿದ್ದ. ಬೈಕ್‌ ತುಂಗಾ ನದಿ ದಂಡೆ ಮೇಲೆ ಪತ್ತೆಯಾಗಿದ್ದ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದರು. ಮೂರು ದಿನದ ನಂತರ ಮೃತದೇಹ ಪತ್ತೆಯಾಗಿದೆ. ತೀರ್ಧಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!