Friday, March 27, 2026
Homebig breakingಕಠ್ಮಂಡುವಿನಲ್ಲಿ ಪ್ರಬಲ ಭೂಕಂಪನ - 50ಕ್ಕೂ ಹೆಚ್ಚು ಮಂದಿ ಸಾವು - ಹಲವೆಡೆ ಧರೆಗುರುಳಿದ ಕಟ್ಟಡಗಳು

ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪನ – 50ಕ್ಕೂ ಹೆಚ್ಚು ಮಂದಿ ಸಾವು – ಹಲವೆಡೆ ಧರೆಗುರುಳಿದ ಕಟ್ಟಡಗಳು

ಕಠ್ಮಂಡು: ಟಿಬೆಟ್-ನೇಪಾಳ ಗಡಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.
ಭೂಕಂಪನದ ಪ್ರಭಾವ ಚೀನಾ, ಉತ್ತರ ಭಾರತ ಭಾಗದಲ್ಲೂ ಕಂಡುಬಂದಿದೆ. ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ (CINC) ಪ್ರಕಾರ 7.1 ರ ತೀವ್ರತೆಯೊಂದಿಗೆ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಅನೇಕ ಕಟ್ಟಡಗಳು ಕುಸಿದು ಬಿದ್ದಿದ್ದು, ಕಟ್ಟಡದಡಿ ಸಿಲುಕಿದವರ ರಕ್ಷಣೆಗಾಗಿ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಇದರೊಂದಿಗೆ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!