Thursday, July 2, 2026
Homeಇತರೆಬೈಗೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅರುಣ್ ಅಧಿಕಾರ ಸ್ವೀಕಾರ - ಮೂರನೇ ಬಾರಿಗೆ...

ಬೈಗೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅರುಣ್ ಅಧಿಕಾರ ಸ್ವೀಕಾರ – ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಜನನಾಯಕ..!

Telegram Group
Join Now

ಚಿಕ್ಕಮಗಳೂರು : ತಾಲೂಕಿನ ಹಂಗರವಳ್ಳಿಯ ಬೈಗೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅರುಣ್ ಅಧಿಕಾರ ವಹಿಸಿಕೊಂಡರು. ಸಂಘದ ಉಪಾಧ್ಯಕ್ಷರಾಗಿ ದಿಲೀಪ್ ಅಧಿಕಾರದ ಚುಕ್ಕಾಣಿ ಹಿಡಿದರು. ಇದೇ ಸಂದರ್ಭ ವಸಂತಮ್ಮ, ಸುಜಾತ, ಪ್ರದೀಪ್, ಜಗದೀಶ್, ಸಚಿನ್, ಗಣೇಶ್, ರಮೇಶ್, ಮೋಹನ್, ಸುರೇಶ್ ಅವರು ಬೈಗೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾಗಿ ಅಧಿಕಾರ ಸ್ವೀಕರಿಸಿದರು.
ಇಂದು ಹಂಗರವಳ್ಳಿಯಲ್ಲಿ ಪದಗ್ರಹಣ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು. ಗ್ರಾಮ ವ್ಯಾಪ್ತಿಯ ನೂರಾರು ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪಿಸಿಎಆರ್ ಡಿ ಬ್ಯಾಂಕ್ ಅಧ್ಯಕ್ಷ ಕೋಟೆ ರಂಗನಾಥ್, ಉಪಾಧ್ಯಕ್ಷ ರಮೇಶ್ ವಾಜುವಳ್ಳಿ, ಜಿಲ್ಲಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಸತೀಶ್, ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಈ. ಮಂಜುನಾಥ್, ಉಪಾಧ್ಯಕ್ಷ ಜಯರಾಂ ಗೌಡ, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ನಿರಂಜನ್, ಮೇಲ್ವಿಚಾರಕ ರಘು, ಆಲ್ದೂರು ಮಂಡಲದ ಬಿಜೆಪಿ ಅಧ್ಯಕ್ಷ ರವಿ ಬಸರವಳ್ಳಿ, ಆವುತಿ ಹೋಬಳಿಯ ಬಿಜೆಪಿ ಅಧ್ಯಕ್ಷ ಕೆರೆಮಕ್ಕಿ ಮಹೇಶ್, ಬಿಜೆಪಿ ನಾಯಕ ದೀಪಕ್ ದೊಡ್ಡಯ್ಯ, ಬೈಗೂರಿನ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾ ಅಧಿಕಾರಿ ಪ್ರದೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಬೈಗೂರು ಕೃಷಿ ಪತ್ತಿನ ಸಹಕಾರ ಸಂಘದ ಚುಕ್ಕಾಣಿ ಹಿಡಿದ ಅರುಣ್ ನೇತೃತ್ವದ ತಂಡವನ್ನ ಅಭಿನಂದಿಸಿದರು. ಅರುಣ್ ಅವರು ಇದು ಮೂರನೇ ಬಾರಿ ಅಧ್ಯಕ್ಷಗಾದಿ ಏರುತ್ತಿರುವುದು ವಿಶೇಷ. ಬೈಗೂರು ಸೊಸೈಟಿಯನ್ನ ಮತ್ತಷ್ಟು ಸದೃಢವನ್ನಾಗಿಸುವ ಪಣ ತೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments