Friday, March 27, 2026
Homebig breakingನಕಲಿ ದಾಖಲೆ ನೀಡಿ ಅಂಚೆ ಇಲಾಖೆಯಲ್ಲಿ ಉದ್ಯೋಗ - ಆರೋಪಿಗೆ 07 ವರ್ಷ ಕಠಿಣ ಶಿಕ್ಷೆ...

ನಕಲಿ ದಾಖಲೆ ನೀಡಿ ಅಂಚೆ ಇಲಾಖೆಯಲ್ಲಿ ಉದ್ಯೋಗ – ಆರೋಪಿಗೆ 07 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ..!

ಮಡಿಕೇರಿ : ನಕಲಿ ಅಂಕಪಟ್ಟಿ ಸೃಷ್ಟಿಸಿ ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆದು ಸರ್ಕಾರಕ್ಕೆ ವಂಚಿಸಿದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ೭ ವರ್ಷ ಕಠಿಣ ಶಿಕ್ಷೆ ಹಾಗೂ ೧,೨೫,೦೦೦ ರೂ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.
ಕಾರೆಕಾಡು ನಿವಾಸಿ ಎಂ.ಬಿ. ಸಂದೇಶ್‌(೩೨) ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿ. ೨೦೧೯ರಲ್ಲಿ ನಡೆದ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ ಹುದ್ದೆಯ ನೇಮಕಾತಿ ವೇಳೆ ಸಂದೇಶ್‌ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ಜೊತೆಗೆ ಸಲ್ಲಿಸಿದ್ದ ದಾಖಲಾತಿಗಳು ನಕಲಿ ಅನ್ನೋದು ನಂತರದಲ್ಲಿ ಗೊತ್ತಾಗಿದೆ. ನಕಲಿ ದಾಖಲೆ ನೀಡಿ ಉದ್ಯೋಗ ಪಡೆದು ಸರ್ಕಾರಕ್ಕೆ ವಂಚಿಸಿದ್ದ ಸಂಬಂಧ ಮಡಿಕೇರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ೨೦೨೨ರಲಿ ಪೊಲೀಸರು ಸಂದೇಶನನ್ನು ಬಂದಿಸಿದ್ದರು. ತನಿಖೆ ನಡೆಸಿದ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ‌ ಎನ್.ಬಿ. ಜಯಲಕ್ಷ್ಮೀ ಅವರು ಜನವರಿ ೧೦ರಂದು ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಎಸ್.‌ ಸಂತೋಷ್‌ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!