ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಸರಿಗಮ ವಿಜಿ ಕೊನೆಯುಸಿರೆಳೆದಿದ್ದಾರೆ. ೭೬ ವರ್ಷ ವಯಸ್ಸಿನ ವಿಜಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಬೆಳವಲದ ಮಡಿಲಲ್ಲಿ ಅವರು ನಟಿಸಿದ ಮೊದಲ ಚಿತ್ರ. ಒಟ್ಟು ೨೬೯ ಚಿತ್ರದಲ್ಲಿ ನಟಿಸಿದ್ದು, ತನ್ನದೇ ಆದ ವಿಭಿನ್ನ ಶೈಲಿಯ ನಟನೆಯಿಂದ ಪ್ರೇಕ್ಷಕರನ್ನು ರಂಜಿಸಿದವರು ವಿಜಿ. ಟೈಗರ್ ಪ್ರಭಾಕರ್ ಅವರ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದರು. ೮೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ವಿಜಿ ಕಾರ್ಯನಿರ್ವಹಿಸಿದ್ದಾರೆ. ಸಂಸಾರದಲ್ಲಿ ಸರಿಗಮ ನಾಟಕದಿಂದ ಖ್ಯಾತಿ ಗಳಿಸಿದ ಅವರಿಗೆ ಆ ನಾಟಕದಿಂದಲೇ ಸರಿಗಮಪ ವಿಜಿ ಅಂತ ಹೆಸರುಗಳಿಸಿದರು.
ವಿಜಿ ನಿಧನಕ್ಕೆ ಸ್ಯಾಂಡಲ್‌ವುಡ್ ಮಂದಿ ಸಂತಾಪ ಸೂಚಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಜೀವನದ ಸರಿಗಮ ಜರ್ನಿ ಮುಗಿಸಿದ ವಿಜಿ – ಹಿರಿಯ ನಟನಿಗೆ ಕಂಬನಿಯ ವಿದಾಯ
RELATED ARTICLES
