Monday, March 30, 2026
Homebig breakingದರ್ಶನ್‌ ಮನವಿ ಲೆಕ್ಕಿಸದ ಪೊಲೀಸರು - ಗನ್‌ ಲೈಸನ್ಸ್‌ ರದ್ದು..!

ದರ್ಶನ್‌ ಮನವಿ ಲೆಕ್ಕಿಸದ ಪೊಲೀಸರು – ಗನ್‌ ಲೈಸನ್ಸ್‌ ರದ್ದು..!

ಮೈಸೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಂದೂಕು ಪರವಾನಗಿ ರದ್ದಾಗಿದೆ. ಈ ಹಿಂದೆ ನಟನಾಗಿದ್ದ ಸಂದರ್ಭ ದರ್ಶನ್ ತಮ್ಮ ರಕ್ಷಣೆಗಾಗಿ ಪರವಾನಗಿ ಪಡೆದು ಬಂದೂಕು ಹೊಂದಿದ್ದರು. ಕೆಲ ದಿನದ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಬಂದೂಕು ಪರವಾನಗಿ ರದ್ದು ಮಾಡುವುದಾಗಿ ಪೊಲೀಸರು ಹೇಳಿದ್ದರು.
ಈ ನಡುವೆ ಪೊಲೀಸರಿಗೆ ಪತ್ರ ಬರೆದಿದ್ದ ದರ್ಶನ್, ತಮ್ಮ ಬಂದೂಕು ಲೈಸೆನ್ಸ್ ರದ್ದು ಮಾಡದಂತೆ ಮನವಿ ಮಾಡಿದ್ದರು. ಆದರೆ ದರ್ಶನ್ ಮನವಿಯನ್ನು ತಿರಸ್ಕರಿಸಿರುವ ಪೊಲೀಸ್ ಇಲಾಖೆ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಬಂದೂಕನ್ನು ಇರಿಸಿಕೊಳ್ಳುವಂತಿಲ್ಲ ಎಂದಿದೆ. ಅಲ್ಲಿವರೆಗೆ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ. ಲೈಸೆನ್ಸ್ ರದ್ದಾಗಿರುವ ಕಾರಣ, ದರ್ಶನ್ ಈ ಕೂಡಲೇ ತಮ್ಮ ಬಂದೂಕನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!